ಸುಬ್ರಹ್ಮಣ್ಯ: ಸುಬ್ರಹ್ಮಣ್ಯದಲ್ಲಿ ನಡೆದ ಲೀಗ್ ಮಾದರಿಯ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಉದಯಶಂಕರ ಭಟ್ ಮಾಲಕತ್ವದ ಶ್ರೀ ರಕ್ಷಾ ಸುಬ್ರಹ್ಮಣ್ಯ ತಂಡ ಪ್ರಥಮ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.
ಉಮೇಶ ಕೆ.ಎನ್. ಮಾಲಕತ್ವದ ಪ್ರಶಾಂತ್ ಸ್ಪೋರ್ಟ್ಸ್ ಕ್ಲಬ್ ದ್ವಿತೀಯ ಸ್ಥಾನ ಹಾಗೂ ಜೀವನ್ ಮಾಲಕತ್ವದ ತಸ್ವಿಕ ಫ್ರೆಂಡ್ಸ್ ಸುಬ್ರಹ್ಮಣ್ಯ ತೃತೀಯ ಸ್ಥಾನವನ್ನು ತನ್ನದಾಗಿಸಿದೆ.
ಹೊನಲು ಬೆಳಕಿನ ಲೀಗ್ ಮಾದರಿಯ ಪಂದ್ಯಾಟದಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದವು.
ಸಮಾರೋಪ ಸಮಾರಂಭದಲ್ಲಿ ಸುಬ್ರಹ್ಮಣ್ಯ ಕುಕ್ಕೆಶ್ರೀ ಫ್ರೆಂಡ್ಸ್ ಅಧ್ಯಕ್ಷ ಭವಿಷ್, ಉದ್ಯಮಿ ನಾಣಯ್ಯ ದಂಪತಿ, ದೈಹಿಕ ಶಿಕ್ಷಣ ನಿರ್ದೇಶಕ ರಾಧಾಕೃಷ್ಣ ಚಿದ್ಗಲ್, ಮೋಹಿತ್ ಜೇನು ಕೋಡಿ, ದೀಪಕ್ ನಂಬಿಯಾರ್ ವಿಜೇತರಿಗೆ ಬಹುಮಾನ ವಿತರಿಸಿದರು.
ಉತ್ತಮ ಹೊಡೆತಗಾರನಾಗಿ ಪ್ರಶಾಂತ್ ಸ್ಪೋರ್ಟ್ಸ್ ಕ್ಲಬ್ ನ ಆದರ್ಶ, ಉತ್ತಮ ಎತ್ತುವಿಕೆಗಾಗಿ ಶ್ರೀ ರಕ್ಷಾ ತಂಡದ ದಂಡೇಶ್ ಹಾಗೂ ಸರ್ವಾಂಗೀಣ ಆಟಗಾರನಾಗಿ ಶ್ರೀ ರಕ್ಷಾ ತಂಡದ ಸೋಮಶೇಖರ್ ವೈಯಕ್ತಿಕ ಬಹುಮಾನ ಪಡೆದರು.