ಬೆಳಗಾವಿ ಅಧಿವೇಶನದಲ್ಲಿ ಬೃಹತ್ ಪ್ರತಿಭಟನೆ, ಹಕ್ಕೊತ್ತಾಯ ಮಂಡನೆ

ಪುತ್ತೂರು: ವಿಕಲಚೇತನರಿಗೆ ಸರಕಾರದ ಹಲವು ಯೋಜನೆಗಳು ಸಹಿತ ವೇತನ, ಪ್ರಯಾಣ ಭತ್ಯೆ ಮುಂತಾದ ಸವಲತ್ತುಗಳು ನಮಗೆ ಸಿಗಬೇಕು ಎಂದು ಒತ್ತಾಯಿಸಿ ಡಿ. 7ರಂದು ನಡೆಯುವ ಬೆಳಗಾವಿ ಅಧಿವೇಶನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದ್ದು, ಹಕ್ಕೊತ್ತಾಯ ಮಂಡಿಸಲಿದ್ದೇವೆ ಎಂದು ಪುನರ್ ವಸತಿ ಕಾರ್ಯಕರ್ತರ ಜಿಲ್ಲಾ ಅಧ್ಯಕ್ಷ ಜೋನ್ ಬ್ಯಾಪ್ಟಿಸ್ಟ್ ಡಿ’ಸೋಜಾ ತಿಳಿಸಿದ್ದಾರೆ.

ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ವಿಕಲಚೇತನ ವಿವಿಧೋದ್ದೇಶ ಸಂಘ, ನಗರ ಹಾಗೂ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರ ಜಿಲ್ಲಾ ಒಕ್ಕೂಟ ರಾಜ್ಯ ಕಮಿಟಿಯ ನಿರ್ದೇಶನದಂತೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕಳೆದ 15 ವರ್ಷಗಳಿಂದ ವಿಕಲಚೇತನರಾದ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುತ್ತಾ ಬಂದಿದ್ದರೂ ನಮ್ಮ ಮನವಿಗೆ ಯಾವುದೇ ಸರಕಾರ ಸ್ಪಂದಿಸುತ್ತಿಲ್ಲ. ಸಮಾಜದ ಕಟ್ಟ ಕಡೆಯ ವಿಕಲಚೇತನರು ಕಳೆದ ಹಲವಾರು ವರ್ಷಗಳಿಂದ ವಿಕಲಚೇತನರ ಸರ್ವಾಂಗೀಣ ಅಭಿವೃದ್ಧಿ ನಿಟ್ಟಿನಲ್ಲಿ ಸರಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಾ ಬಂದಿದ್ದೇವೆ ಎಂದರು.

ಒಂದೆಡೆ ನಮಗೆ ನೀಡುವ ವೇತನ ಜೀವನ ನಿರ್ವಹಣೆ ಮಾಡಲು ಸಾಕಾಗುತ್ತಿಲ್ಲ. ಮತ್ತೊಂದೆಡೆ ನಮ್ಮ ಹುದ್ದೆಗಳನ್ನು ಖಾಯಂ ಮಾಡುತ್ತಿಲ್ಲ. ಆದ್ದರಿಂದ ಖಾಯಂ ಆಗುವವರೆಗೆ ಎಂಆರ್ ಡಬ್ಲ್ಯೂ ಸಹಿತ ವಿಆರ್ ಡಬ್ಲ್ಯೂ, ಯುಆರ್ ಡಬ್ಲ್ಯೂ ಕಾರ್ಯಕರ್ತರಿಗೆ 18 ಸಾವಿರ ರೂ. ವೇತನ ನೀಡಬೇಕು. ಅಲ್ಲದೆ ನಮಗೆ ಪ್ರತ್ಯೇಕ ನಿಗಮ ರಚನೆ ಆಗಬೇಕು. ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆಯಲ್ಲಿ ಆಗ್ರಹಿಸಲಾಗುವುದು ಎಂದು ಅವರು ತಿಳಿಸಿದರು.



































 
 

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ರಾಜ್ಯ ನಿರ್ದೇಶಕ ಪ್ರವೀಣ್ ನಾಯಕ್, ಜಿಲ್ಲಾ ಖಜಾಂಚಿ ಮುತ್ತಪ್ಪ ಪೆರಾಬೆ, ಸದಸ್ಯೆರಾದ ಸಹನ ಆರ್, ಶರ್ಮಿಳಾ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top