8 ಬಾರಿ ಅಂಬಾರಿ ಹೊತ್ತು ನಾಡಿನ ಪ್ರೀತಿ ಗಳಿಸಿದ್ದ ಅರ್ಜುನನ ಅಂತ್ಯಸಂಸ್ಕಾರ ಸಕಲೇಶಪುರ ಹಾಸನದ ಯಸಲೂರಿನ ನೆಡುತೋಪಿನಲ್ಲಿ ನಡೆಯಿತು.
ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರದ ವಿಧಿವಿಧಾನ ನೆರವೇರಿಸಲಾಯಿತು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಅರ್ಜುನನಿಗೆ ಗೌರವ ಸಲ್ಲಿಸಲಾಯಿತು. ಬಳಿಕ ಜೆಸಿಬಿ ಸಹಾಯದಿಂದ ಅಂತ್ಯಸಂಸ್ಕಾರ ಮಾಡಲಾಯಿತು.
ಅಂತ್ಯಸಂಸ್ಕಾರದ ವೇಳೆ ಮಾವುತನ ರೋಧನ ಮುಗಿಲುಮುಟ್ಟಿತ್ತು. ಎಂತಾ ರಾಜನನ್ನು ಮಿಸ್ ಮಾಡಿಕೊಂಡೆ. ನನ್ನ ಆನೆಯನ್ನು ಬದುಕಿಸಿ ಕೊಡಿ ಎಂಬ ರೋಧನ ಕಣ್ಣೀರು ಬರಿಸುವಂತಿತ್ತು.