ಪುತ್ತೂರು: ಭಾಗ್ಯಜ್ಯೋತಿ ಜ್ಞಾನವಿಕಾಸ ಕೇಂದ್ರದ ಮಾಸಿಕ ಸಭೆ ನಡೆಯಿತು.
ವಕೀಲೆ ಸ್ವಾತಿ ಜೆ. ಶೆಟ್ಟಿ ಅವರು ಮಹಿಳಾ ಸಬಲಿಕರಣ ಮತ್ತು ಮಹಿಳೆಯರಿಗೆ ಲಭ್ಯವಿರುವ ಉಚಿತ ಕಾನೂನಿನ ಬಗ್ಗೆ ಮಾಹಿತಿ ನೀಡಿದರು.
ಜ್ಞಾನವಿಕಾಸ ಸಮನ್ವಯ ಅಧಿಕಾರಿ ಕಾವ್ಯಶ್ರೀ ಅವರು ಜ್ಞಾನವಿಕಾಸ ಕೇಂದ್ರದ ಸಮಯಪಾಲನೆ, ಹಾಜರಾತಿ, ಮಾಹಿತಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ವಾರ್ಷಿಕೋತ್ಸವದ ಕುರಿತು ತಿಳಿಸಿದರು.
ಮೀನಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಸೇವಾಪ್ರತಿನಿಧಿ ಆಶಾಲತಾ, ಸಂಯೋಜಕಿ ವಿದ್ಯಾಲಕ್ಷ್ಮಿ ಸಹಕರಿಸಿದರು. ಜನನಿ ಸಂಘದ ಸದಸ್ಯರು ಜವಾಬ್ದಾರಿ ನಿರ್ವಹಿಸಿದರು. ಬಳಿಕ ವಾರ್ಷಿಕೋತ್ಸವದ ಪ್ರಯುಕ್ತ ಆಟೋಟ ಸ್ಪರ್ಧೆ ನಡೆಯಿತು.