ಪುತ್ತೂರು: ಸಿಪಿಐ(ಎಂ) ಪಕ್ಷದ ರಾಜ್ಯ ಮಟ್ಟದ ಸೈದ್ದಾಂತಿಕ ಅದ್ಯಯನ ಶಿಬಿರವು ಡಿ.21 ರಿಂದ 24ರ ತನಕ ಪುತ್ತೂರಿನಲ್ಲಿ ನಡೆಯಲಿದೆ ಎಂದು ಸಿಪಿಐ(ಎಂ) ಪುತ್ತೂರು ತಾಲೂಕು ಕಾರ್ಯದರ್ಶಿ ಪಿ.ಕೆ.ಸತೀಶನ್ ತಿಳಿಸಿದ್ದಾರೆ.
ಸ್ವಾಗತ ಸಮಿತಿ ರಚನಾ ಸಭೆಯಲ್ಲಿ ಅವರು ಈ ವಿಚಾರ ತಿಳಿಸಿದ್ದು, ರಾಜ್ಯ ಮಟ್ಟದ ರೈತ, ಕಾರ್ಮಿಕ, ದಲಿತ, ಯುವಜನ ನಾಯಕರುಗಳಿಗೆ ನೀಡುವ ಈ ಸೈದ್ದಾಂತಿಕ ಅದ್ಯಯನ ಶಿಬಿರ ನಡೆಸಲಾಗುವುದು ಎಂದು ತಿಳಿಸಿದರು.
ಸ್ವಾಗತ ಸಮಿತಿ ಅದ್ಯಕ್ಷರಾಗಿ ಪುತ್ತೂರು ಪಿಕೆ ಸತೀಶನ್, ಕಾರ್ಯದರ್ಶಿಯಾಗಿ ಬಿ.ಎಂ.ಭಟ್ ಖಜಾಂಜಿಯಾಗಿ ಈಶ್ವರಿ ಮುಂಡೂರು ಆಯ್ಕೆಯಾದರು ಸಮಿತಿಯಲ್ಲಿ ಜನಾರ್ಧನ ಗೌಡ, ಕೃಷ್ಣ, ದಾಮೋದರ ಮೊದಲಾದವರು ಇದ್ದಾರೆ. ವರ್ತಮಾನ ಪರಿಸ್ಥಿತಿಯಲ್ಲಿ ರೈತ, ಕಾರ್ಮಿಕರ ಬದುಕಿನ ಸುಭದ್ರತೆಗೆ ಅವರ ಸಂಘಟನೆಗೆ ನೀಡಬೇಕಾದ ಗಮನ, ಅವರ ಸಂಘಟನೆಗೆ ಕಮ್ಯೂನಿಸ್ಟರ ಪಾತ್ರ ಮೊದಲಾದ ಸೈದ್ದಾಂತಿಕ ವಿಚಾರಗಳ ತರಬೇತಿ ಶಿಬಿರ ಇದಾಗಿದೆ ಎಂದೂ ಅವರು ತಿಳಿಸಿದರು.