ಹಡಗಿಗೆ ಮಹಿಳಾ ಕಮಾಂಡಿಗ್‌ ಆಫೀಸರ್‌!!

ಭಾರತೀಯ ನೌಕಾಪಡೆ ಮೊದಲ ಬಾರಿಗೆ ಸೇನೆಯ ಹಡಗೊಂದಕ್ಕೆ ಮಹಿಳಾ ಕಮಾಂಡಿಂಗ್‌ ಆಫೀಸರ್‌ ಅವರನ್ನು ನೇಮಿಸಿದೆ.

ಎಲ್ಲ ಜವಾಬ್ದಾರಿಗಳು, ಶ್ರೇಣಿಗಳಲ್ಲೂ ಮಹಿಳೆಯರಿಗೆ ಸಮಾನ ಆದ್ಯತೆ ಎಂಬ ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಸ್ತುತ ನೌಕಾಪಡೆಯಲ್ಲಿ ಮಹಿಳಾ ಅಗ್ನಿವೀರರ ಸಂಖ್ಯೆ 1000 ದಾಟಿದೆ. ಈ ಸಂಖ್ಯೆ ನಮ್ಮ ಉದ್ದೇಶವನ್ನು ಸ್ಪಷ್ಟವಾಗಿಸುತ್ತದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌. ಹರಿಕುಮಾರ್‌ ಹೇಳಿದ್ದಾರೆ.

ನಮ್ಮ ಹಡಗುಗಳು, ಸಬ್‌ಮರಿನ್‌ಗಳು, ಯುದ್ಧವಿಮಾನಗಳು ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ ಸ್ಥಳಗಳಲ್ಲಿ ಉತ್ಸಾಹದಿಂದ ಕಾರ್ಯಾಚರಣೆ ನಡೆಸುತ್ತಿವೆ. ಮುಖ್ಯವಾಗಿ ಚೀನಾದ ಹಸ್ತಕ್ಷೇಪ ಹೆಚ್ಚಾಗಿರುವ ಹಿಂದೂ ಮಹಾಸಾಗರ ಮತ್ತು ಅದರಾಚೆಗೆ ನಮ್ಮ ತುಕಡಿಗಳನ್ನು ನಿಯೋಜಿಸಲಾಗಿದೆ. ದೇಶವನ್ನು ರಕ್ಷಿಸುವುದು, ರಾಷ್ಟ್ರೀಯ ಹಿತವನ್ನು ಕಾಯುವುದು ನಮ್ಮ ಗುರಿ ಎಂದಿದ್ದಾರೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top