ಬೆಳ್ತಂಗಡಿ: ದಿಢೀರ್ ಅಸ್ವಸ್ಥಗೊಂಡು ವಿವಾಹಿತ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಚಿಬಿದ್ರೆ ಎಂಬಲ್ಲಿ ನಡೆದಿದೆ.
ಚಿಬಿದ್ರೆ ಗ್ರಾಮದ ಅನ್ನಾರು ನಿವಾಸಿ ಚಂದ್ರಕಲಾ (31) ಮೃತಪಟ್ಟವರು.
ಹಲವು ವರ್ಷಗಳಿಂದ ಹೃದಯ ಸಂಬಂಧಿ ಖಾಯಿಲೆಗೆ ತುತ್ತಾಗಿ ಅನಾರೋಗ್ಯದಿಂದ ಚಂದ್ರಕಲಾ ಅವರು ಬಳಲುತ್ತಿದ್ದರು. ಸಂಜೆ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದು ಬಂದಿದೆ.