ಪುತ್ತೂರು: ಪುತ್ತಿಲ ಪರಿವಾರ ಕುರಿಯ-ಕೆಮ್ಮಿಂಜೆ ಗ್ರಾಮಾಂತರ ಸಮಿತಿ ವತಿಯಿಂದ ನೈತಾಡಿ ಕಲ್ಲುಗುಡ್ಡೆ ಮೈದಾನದಲ್ಲಿ ನಡೆಯಲಿರುವ ಶ್ರೀ ಸಿದ್ಧಿವಿನಾಯಕ ವೃತ ಪೂಜೆಯ ಆಮಂತ್ರಣ ಬಿಡುಗಡೆ ಬುಧವಾರ ನಡೆಯಿತು.
ಡಿ. 12ರಂದು ಪೂಜೆ ನಡೆಯಲಿದ್ದು, ಉದಯಗಿರಿ ಶ್ರೀ ವಿಷ್ಣುಮೂರ್ತಿ ಸನ್ನಿಧಿಯಲ್ಲಿ ಆಮಂತ್ರಣ ಬಿಡುಗಡೆ ಮಾಡಲಾಯಿತು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಆಮಂತ್ರಣ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ರಾಜೀವ ಸುವರ್ಣ, ಅರುಣ್ ರೈ ಡಿಂಬ್ರಿ, ರಾಜಾರಾಮ್ ನೆಲ್ಲಿತಾಯ, ಪೂಜಾ ಸಮಿತಿ ಅಧ್ಯಕ್ಷ ಶಂಕರ ನಾರಾಯಣ ರಾವ್, ಪ್ರ. ಕಾರ್ಯದರ್ಶಿ ರೇಖನಾಥ್ ರೈ ಸಂಪ್ಯದಮೂಲೆ, ಉಪಾಧ್ಯಕ್ಷ ಮೋಹನ್ ಸಾಲ್ಯಾನ್, ಜೊತೆ ಕಾರ್ಯದರ್ಶಿ ಕೃಷ್ಣ ಬೋಳಂತಿಮರ್, ಖಜಾಂಚಿ ಸತೀಶ್ ಆರ್ ಬೋಳಂತಿಮರ್, ಗೌರವಧ್ಯಕ್ಷರಾದ ಪ್ರಸಾದ್ ಹೆಬ್ಬಾರ್, ಸಂತೋಷ್ ರೈ, ಬ್ರಿಜೇಶ್ ಶೆಟ್ಟಿ, ಪರಿವಾರದ ರೂಪೇಶ್ ನಾಯ್ಕ್, ಉದಯ ಬಲ್ಲಾಳ್, ರಾಘವೇಂದ್ರ ಅಂಗಿಂತಾಯ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.