ಮಂಗಳೂರು: ವ್ಯಕ್ತಿಯೊಬ್ಬರು ಅದ್ದೂರು ಸೇತುವೆಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮೂಲತಃ ಆಕಾಶಭವನದ ನಿವಾಸಿ ಪ್ರಶಾಂತ್ (41) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ.
ಸ್ನೇಹಿತ ದೇವಿಪ್ರಸಾದ್ ಜೊತೆಗೆ ಎರಡು ದಿನಗಳ ಕಾಲ ನಗರದ ವಿವಿಧ ದೇವಸ್ಥಾನಕ್ಕೆ ತೆರಳಿ ಇಂದು ಗುರುಪುರದ ಸೇತುವೆ ಬಳಿ ಬಂದಿದ್ದರು. ಈ ನಡುವೆ ಪ್ರಶಾಂತ್ ಸೇತುವೆಯಿಂದ ನದಿಗೆ ಹಾರಿ ನೀರಿನಲ್ಲಿ ಮುಳುಗುತ್ತಿರುವುದನ್ನು ದೇವಿಪ್ರಸಾದ್ ನೋಡಿದ್ದು, ಕೂಡಲೇ ಬಂಟ್ವಾಳ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಪ್ರಶಾಂತ್ ಅವರು ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇವರಿಗೆ ಮದುವೆಯಾಗಿದ್ದು, ಪುಟ್ಟ ಮಗುವೂ ಇದೆ. ಇದೇ ಕಾರಣಕ್ಕೆ ಮನೆಯಲ್ಲಿ ಮಾತುಕತೆ ನಡೆದು ಬಳಿಕ ಸ್ನೇಹಿತ ದೇವಿಪ್ರಸಾದ್ ಜೊತೆಗೆ ದೇಗುಲಕ್ಕೆ ಹೋಗಿದ್ದರು. ಇದೀಗ ಅವರ ದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ ಎಂದು ತಿಳಿದು ಬಂದಿದೆ.