ಕಾರಾಗೃಹದಿಂದ ಬಿಡುಗಡೆಯಾದ ಮುರುಘಾಶ್ರೀ

ಚಿತ್ರದುರ್ಗ: ಫೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿದ್ದ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಗುರುವಾರ ಚಿತ್ರದುರ್ಗ ಕಾರಾಗೃಹದಿಂದ ಬಿಡುಗಡೆ ಹೊಂದಿದರು.

ನ್ಯಾಯಾಲಯ ನೀಡಿದ್ದ ಬಿಡುಗಡೆ ಆದೇಶವನ್ನು ಬುಧವಾರ ಚಿತ್ರದುರ್ಗ ಕಾರಾಗೃಹಕ್ಕೆ ವಕೀಲರು ತಲುಪಿಸಿದ್ದರು. ಆದರೆ ಸಮಯ ಮೀರಿದ್ದರಿಂದ, ಬುಧವಾರ ಬಿಡುಗಡೆ ಮಾಡಿರಲಿಲ್ಲ. ಹಾಗಾಗಿ ಗುರುವಾರ ಮಧ್ಯಾಹ್ನದ ಸಂದರ್ಭ ಬಿಡುಗಡೆ ಮಾಡಲಾಗಿದೆ.

ಮುರುಘಾ ಶರಣರ ಪಾಸ್ ಪೋರ್ಟನ್ನು ನ್ಯಾಯಾಲಯ ವಶಕ್ಕೆ ಪಡೆದುಕೊಂಡಿದೆ. ಮಾತ್ರವಲ್ಲ ಇಬ್ಬರ ಜಾಮೀನು ಪಡೆದುಕೊಂಡಿದ್ದು, ಸಾಕ್ಷ್ಯ ನಾಶ ಮಾಡುವಂತಿಲ್ಲ ಎಂಬ ಷರತ್ತು ವಿಧಿಸಿದೆ. ಮಾತ್ರವಲ್ಲ, ಸಾಕ್ಷಿಗಳನ್ನು ಸಂಪರ್ಕ ಮಾಡುವಂತೆಯೂ ಇಲ್ಲ ಎಂಬ ನಿಬಂಧನೆಯನ್ನೂ ವಿಧಿಸಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top