ಅಮರಾವತಿ: ಸಿನಿಮಾ ಅಭಿಮಾನಿಗಳ ಅತಿರೇಕದ ವರ್ತನೆಗೆ ಪ್ರೇಕ್ಷಕರು ಕಂಗಾಲಾದ ಘಟನೆ ಟೈಗರ್ 3 ಸಿನಿಮಾ ಪ್ರದರ್ಶನದ ವೇಳೆ ನಡೆದಿದೆ.


ಆಂಧ್ರ ಪ್ರದೇಶದ ಥಿಯೇಟರ್ ಒಂದರಲ್ಲಿ ಘಟನೆ ನಡೆದಿದ್ದು, ಥಿಯೇಟರ್ ಒಳಗಡೆಯೇ ಅಭಿಮಾಣಿಗಳು ಪಟಾಕಿ ಸಿಡಿಸಿದ್ದಾರೆ. ಇದ್ದಕ್ಕಿದ್ದಂತೆ ಪಟಾಕಿ ಸಿಡಿದ ಕಾರಣ ಪ್ರೇಕ್ಷಕರು ಏನಾಗುತ್ತಿದೆ ಎನ್ನುವುದು ತಿಳಿಯದಂತಾಗಿ, ಧಿಕ್ಕೆಟ್ಟು ಓಡಿದರು.
ಘಟನೆಯಿಂದ ಥಿಯೇಟರಿಗೆ ಹಾನಿಯಾಗಿದ್ದು, ಅಭಿಮಾನಿಗಳ ಅತಿರೇಕದ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.
























