ಕೈಕಾರ ಸರ್ವಶಕ್ತಿ ಯುವಕ ಮಂಡಲ 27ನೇ ವಾರ್ಷಿಕೋತ್ಸವ ಸಮಾರಂಭ

ಪುತ್ತೂರು: ಕೈಕಾರ ಸರ್ವಶಕ್ತಿ ಯುವಕ ಮಂಡಲದ 27ನೇ ವಾರ್ಷಿಕ ಸಮಾರಂಭ ನಡೆಯಿತು.

ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಸಂಘಟನೆಗಳು ಸಮಾಜ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಊರಿನವರ ಆಶೀರ್ವಾದವನ್ನು ಪಡೆಯುವವರಾಗಬೇಕು. ಸಮಾಜದಲ್ಲಿ ನೊಂದವರ ಕಣ್ಣೀರು ಒರೆಸುವ ಕೆಲಸವನ್ನು ಮಾಡಿದರೆ ಮಾತ್ರ ಜನ ನಮ್ಮನ್ನು ಗೌರವಿಸುತ್ತಾರೆ. ಕೈಕಾರದ ಸರ್ವಶಕ್ತಿ ಯುವಕ ಮಂಡಲ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಸಂಘಟನೆಯ ಕರ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಯುವಕರು ಕತ್ತಿ, ದೊಣ್ಣೆ ಹಿಡಿದು ಸಾರ್ವಜನಿಕ ಸ್ಥಳಗಳಲ್ಲಿ ಭಯ ಹುಟ್ಟಿಸುವ ಕೆಲಸವನ್ನು ಮಾಡಿ ಡಾನ್ ಆಗುವ ಪ್ರಯತ್ನ ಬಿಟ್ಟು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದ ಅವರು, ಯುವ ಶಕ್ತಿ ಸಮಾಜದ ಒಳಿತಿಗೆ ಬಳಕೆಯಾಗಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ಧತೆಗೆ ಯುವಕರು ಕಾರಣರಾಗಬೇಕು. ಕೈಕಾರದ ಸರ್ವಶಕ್ತಿ ಯವಕಮಂಡಲದ ಕಾರ್ಯಕರ್ತರು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಮಾದರಿಯಾಗಿದ್ದಾರೆ ಎಂದರು.



































 
 

ಮಂಗಳೂರು ಎಂಆರ್‌ಪಿಎಲ್‌ನ ಸೀತಾರಾಮ ರೈ ಚೆಲ್ಯಡ್ಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿ ಸತೀಶ್ ರೈ ಮಿಷನ್‌ಮೂಲೆ, ಆಳ್ವಾಸ್ ಫ್ರೊಪೆಸರ್ ಡಾ ಸುಧೀರ್ ಶೆಟ್ಟಿ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉದ್ಯಮಿ ಪ್ರಸನ್ನಕುಮಾರ್ ಶೆಟ್ಟಿ ಸಿಝ್ಲರ್,ಕೈಕಾರ ಸರಕಾರಿ ಹಿ ಪ್ರಾ ಶಾಲೆ ಮುಖ್ಯ ಶಿಕ್ಷಕ ರಾಮಣ್ಣ ರೈ ಕರ್ನೂರು, ನಿವೃತ್ತ ಮುಖ್ಯ ಶಿಕ್ಷಕ ಗುರುನಾರಾಯಣ ನಾಯ್ಕ ಗುಮ್ಮಟಗದ್ದೆ, ಉದ್ಯಮಿ ಚಿದಾನಂದ ರೈ ಬೀರ‍್ನಹಿತ್ಲು, ಪ್ರೀತಂ ರೈ ಬೆಳ್ಲಾರೆ, ಆದರ್ಶ ಯು, ಗ್ರಾಪಂ ಸದಸ್ಯೆ ರೇಖಾ ಮೊದಲಾದವರು ಉಪಸ್ಥಿತರಿದ್ದರು.

ಸರ್ವಶಕ್ತಿ ಯುಕಮಂಡಲದ ಗೌರವಾಧ್ಯಕ್ಷ ಪ್ರಕಾಶ್‌ಚಂಧ್ರ ರೈ ಕೈಕಾರ ಸ್ವಾಗತಿಸಿದರು. ಯುವಕಮಂಡಲದ ಅಧ್ಯಕ್ಷ ಪ್ರಜನ್‌ರೈ ತೊಟ್ಲ ವಂದಿಸಿದರು. ಕಾರ್ಯದರ್ಶಿ ರವಿಕಿರಣ್ ಬಲ್ಲೇರಿ ವಂದಿಸಿದರು. ಸಂತೋಷ್‌ಕುಮಾರ್ ರೈ ಕೈಕಾರ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top