ಸುಬ್ರಹ್ಮಣ್ಯ: ದೀನ ದಲಿತರ ಮತ್ತು ಬಡವರ ಮುಖದಲ್ಲಿ ನಗು ತರುವ ನಮ್ಮ ಅಂತರಾಷ್ಟ್ರೀಯ ಲಯನ್ಸ್ ನ ಉದ್ದೇಶದೊಂದಿಗೆ ಬಡವರ ಸೇವೆಯನ್ನು ನಿರಂತರವಾಗಿ ಮುಂದುವರಿಸೋಣ. ಹಾಗೆಯೇ ಮೂಕ ಪ್ರಾಣಿ ಪಕ್ಷಿಗಳ ಮನಸ್ಸನ್ನು ಅರ್ಥೈಸಿಕೊಂಡು ಅವುಗಳಿಗೆ ಬೇಕಾದ ಆಹಾರವನ್ನು ಕಾಡಿನ ಅಂಚಿನಲ್ಲಿ ಸುಲಭವಾಗಿ ಸಿಗುವ ಹಾಗೆ ಬೀಜ ಬಿತ್ತನೆ ಹಾಗೂ ಹಣ್ಣಿನ ಗಿಡಗಳನ್ನು ಹೆಚ್ಚಾಗಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ ಎಂದು ಅಂತರಾಷ್ಟ್ರೀಯ ಲಯನ್ಸ್ ಜಿಲ್ಲೆಯ 317 ಡಿ ಪ್ರಾಂತೀಯ ಅಧ್ಯಕ್ಷೆ ರೇಣುಕಾ ಸದಾನಂದ ಜಾಕೆ ಹೇಳಿದರು.

ಅವರು ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಗೆ ಶುಕ್ರವಾರ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಐನೇಕಿದುನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.

ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನ ಅಧ್ಯಕ್ಷ ರಾಮಚಂದ್ರ ಪಳಂಗಾಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಲಯನ್ಸ್ ಪ್ರಾಂತೀಯ ಪ್ರಥಮ ಸದಸ್ಯ ಸದಾನಂದ ಜಾಕೆ, ಲಯನ್ಸ್ ಪ್ರಾಂತೀಯ ಅಂಬ್ಯಾಸಿಡರ್ ಪ್ರೊ. ಬಾಲಚಂದ್ರಗೌಡ, ಪ್ರಾಂತೀಯ ಕೋ-ಆರ್ಡಿನೇಟರ್ ಪ್ರಕಾಶ್ ಡಿಸೋಜ, ವಲಯ ಅಧ್ಯಕ್ಷ ಲಿಜೊ ಜೋಸ್, ವಲಯ ಕೊಆರ್ಡಿನೇಟರ್ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ಅಧ್ಯಕ್ಷ ಪ್ರೊ. ರಂಗಯ್ಯ ಶೆಟ್ಟಿಗಾರ್, ಸಂಪಾಜೆ, ಸುಳ್ಯ, ಪಂಜ ,ಕಡಬ ,ಬೆಳ್ಳಾರೆ ಹಾಗೂ ಗುತ್ತಿಗಾರು ಲಯನ್ಸ್ ಕ್ಲಬ್ ಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗುತ್ತಿಗಾರು ಸೈಂಟ್ ಮೇರಿ ಬ್ರೆಜೆಂಟ್ಸ್ ಶಾಲೆಗೆ 30000 ರೂಪಾಯಿ ಮೊತ್ತದ ಸೀರೆಗಳನ್ನು ಉಚಿತವಾಗಿ ನೀಡಲಾಯಿತು. ಪ್ರಾಂತೀಯ ಕ್ರೀಡಾ ಕೂಟಕ್ಕೆ ಲಯನ್ಸ್ ಸದಸ್ಯರುಗಳಿಗೆ ಟೀ ಶರ್ಟ್ ಗಳನ್ನು ಉಚಿತವಾಗಿ ನೀಡಲಾಯಿತು. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಡಿನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸತೀಶ ಕೂಜುಗೋಡು ಹಾಗೂ ಪವನ್ ದಂಪತಿಗಳನ್ನು ಗೌರವಿಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಚಂದ್ರ ಪಾಳಂಗಾಯ ಸ್ವಾಗತಿಸಿದರು ಪ್ರಾಂತೀಯ ಅಧ್ಯಕ್ಷರ ಪರಿಚಯವನ್ನು ಅಶೋಕ್ ಕುಮಾರ್ ಮೂಲೆ ಮಜಲು ವಾಚಿಸಿದರು. ಕಾರ್ಯದರ್ಶಿ ಸತೀಶ ಕೂಜುಗೋಡು ವರದಿ ಮಂಡಿಸಿದರು. ವಿಮಲ ರಂಗಯ್ಯ ವಂದಿಸಿದರು.
























