ಪಾಂಬಾರು ಷಣ್ಮುಖ ಫ್ರೆಂಡ್ಸ್ ಕ್ಲಬ್‍ ವತಿಯಿಂದ ಸಂಪ್ಯ ಆನಂದಾಶ್ರಮಕ್ಕೆ ಗ್ರೈಂಡರ್, ಬೀರಮಲೆ ಪ್ರಜ್ಞಾ ಬುದ್ಧಿಮಾಂದ್ಯರ ಆಶ್ರಮಕ್ಕೆ ಸೋಲಾರ್ ಲೈಟ್ ಕೊಡುಗೆ

ಪಾಂಬಾರು: ಪಾಂಬಾರು ಷಣ್ಮುಖ ಫ್ರೆಂಡ್ಸ್ ಕ್ಲಬ್‍ ವತಿಯಿಂದ ಪುತ್ತೂರಿನ ಸಂಪ್ಯದಲ್ಲಿರುವ ಆನಂದಾಶ್ರಮಕ್ಕೆ ಸುಮಾರು 24 ಸಾವಿರ ರೂ. ಮೌಲ್ಯದ ಗ್ರೈಂಡರ್ ಹಾಗೂ ಬಿರಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಬುದ್ಧಿಮಾಂದ್ಯರ ಆಶ್ರಮಕ್ಕೆ 15 ಸಾವಿರ ರೂ. ಮೌಲ್ಯದ ಸೋಲಾರ್ ಲೈಟನ್ನು ಶನಿವಾರ ನೀಡಲಾಯಿತು.  

ಫ್ರೆಂಡ್ಸ್ ಕ್ಲಬ್‍ ಸದಸ್ಯರು ಹುಲಿವೇಷ ಹಾಕಿ ಕಲೆಕ್ಷನ್ ಮಾಡಿದ ಹಣದಲ್ಲಿ ಈ ಕೊಡುಗೆಗಳನ್ನು ನೀಡಲಾಯಿತು. ಆನಂದಾಶ್ರಮದ ಟ್ರಸ್ಟಿ ಸದಾಶಿವ ಪೈ ಅವರಿಗೆ ಗ್ರೈಂಡರನ್ನು ಹಸ್ತಾಂತರಿಸಲಾಯಿತು. ಪ್ರಜ್ಞಾ ಆಶ್ರಮದ ಮುಖ್ಯಸ್ಥ ಅಣ್ಣಪ್ಪ ಅವರಿಗೆ ಸೋಲಾರ್ ಲೈಟನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಾತ್ವಿಕ್ ಜೆ.ಪಿ., ಸತೀಶ್ ಕೆರೆಮೂಲೆ, ಧನುಕೀರ್ತಿ ಪಿ., ಚಿನ್ನಪ್ಪ ಕೆರೆಮೂಲೆ, ಪ್ರತೀಶ್ ಪೂಜಾರಿ, ಯೋಗೀಶ್ ಪಿ., ಜಯಂತ ಪೂಜಾರಿ, ಮೋಹಿತ್ ಕುಮಾರ್, ಜಯ ಪ್ರವೀಣ್ ಪಾಂಬಾರು, ಶ್ರೀಕಾಂತ್ ಕೆರೆಮೂಲೆ, ಚಂದ್ರಾ ಪಾಂಬಾರು, ಸತೀಶ್ ಮೇಗಿನಪಾಂಬಾರು, ಕಿಶೋರ್ ಎಂ.ಡಿ., ಗಿರೀಶ ಕೆರೆಮೂಲೆ, ಪ್ರದೀಪ್ ಕೆರೆಮೂಲೆ, ದಿನೇಶ್ ಕೆರೆಮೂಲೆ, ಕೀರ್ತನ್ ಕುಮಾರ್, ಯಕ್ಷಿತ್ ಚಾಮೆತಕುಮೇರು, ಅಂಕಿತ್ ರೈ ಕೆರೆಮೂಲೆ, ಪರೀಕ್ಷಿತ್, ಕಿರಣ್ ಎಂ.ಡಿ., ಕೀರ್ತನ್ ಎಂ.ಡಿ., ಪ್ರಜ್ವಲ್ ಪೂಜಾರಿ, ಮನೋಜ್ ಚಾಮೆತಕುಮೇರು, ವಿನೇಶ್ ಕೆರೆಮೂಲೆ, ಕಾರ್ತಿಕ್ ವಾಲ್ತಾಜೆ, ಶ್ರಿಥಿನ್ ಚಾಮೆತಕುಮೇರು ಉಪಸ್ಥಿತರಿದ್ದರು.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top