ದೇವಸ್ಥಾನದ ಆಡಳಿತ ಮಂಡಳಿ ಸದಸ್ಯನೆಂದು ಹೇಳಿ ವಂಚಿಸಿದ ಭೂಪ : ಬರೋಬ್ಬರಿ 30 ಲಕ್ಷ ವಂಚನೆ

ಉಡುಪಿ: ವ್ಯಕ್ತಿಯೊಬ್ಬ ತಾನು ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯನೆಂದು ಹೇಳಿಕೊಂಡು ಬೆಂಗಳೂರು ಮೂಲದ ಭಕ್ತರ ಕುಟುಂಬವೊಂದಕ್ಕೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವುದಾಗಿ ಹೇಳಿ 30.73 ಲಕ್ಷ ರೂ. ಹಣ ಪಡೆದು ವಂಚಿಸಿದ ಘಟನೆ ನಡೆದಿದೆ.

ಕೊಲ್ಲೂರು ನಿವಾಸಿ ಸುಧೀರ್ ಕುಮಾರ್ ಎಂಬಾತನೇ ಕುಟುಂಬಕ್ಕೆ ವಂಚಿಸಿದ ವ್ಯಕ್ತಿ.

ಬೆಂಗಳೂರಿನ ದಿಲ್ಲಾ ತನ್ನ ಗಂಡ ಮತ್ತು ಕುಟುಂಬ ಸದಸ್ಯರ ಜತೆ ಕೊಲ್ಲೂರು ದೇವಸ್ಥಾನಕ್ಕೆ ಬಂದಿದ್ದ ವೇಳೆ ತನ್ನ ಅಣ್ಣ ದಿಲೀಶ್ ಅವರಿಗೆ ಪರಿಚಯವಿದ್ದ ಸುಧೀರ್ ಕುಮಾರ್ ಎಂಬಾತ ಪರಿಚಯ ಆಗಿದ್ದ. ತಾನು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯನೆಂದು ನಂಬಿಸಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುವುದಾಗಿ ಹೇಳಿ ಹಣ ಹಾಕುವಂತೆ ಕೇಳಿಕೊಂಡಿದ್ದ.



































 
 

ಅಲ್ಲದೆ, ದಿಲ್ಲಾ ಅವರ ತಾಯಿಗೆ ಸಂಬಂಧಿಸಿದ ಜಾಗದ ಖಾತೆ ಬದಲಾವಣೆ ಮಾಡಿಸುವುದಾಗಿ ಹೇಳಿ ದಿಲ್ಲಾ ಮತ್ತು ಅವರ ಅಣ್ಣ ದಿಲೀಶ್ ಅವರಿಂದ ಒಟ್ಟು 30,73,600 ರೂ.ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಖಾತೆ ಬದಲಾವಣೆಗಾಗಿ ತಾಯಿಯ ಸಹಿ ಹಾಕಿಕೊಡುವಂತೆ ಕೇಳಿದ್ದರಿಂದ ಸಂಶಯಗೊಂಡು ದೇವಸ್ಥಾನಕ್ಕೆ ಬಂದು ವಿಚಾರಿ ಸುಧೀರ್ ಎನ್ನುವ ವ್ಯಕ್ತಿ ಆಡಳಿತ ಮಂಡಳಿಯ ಸದಸ್ಯನಲ್ಲವೆಂಬುದು ತಿಳಿದುಬಂದಿತ್ತು. ಇದರಿಂ ದಿಲ್ಲಾ ಅವರು ಸುಧೀರ್ ಕುಮಾರ್ ವಿರುದ್ಧ ಹಣ ವಂಚನೆ ಮಾಡಿದ ಆರೋಪದಲ್ಲಿ ಕೊಲ್ಲೂರು ಠಾಣೆಗೆ ದೂರು ನೀಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top