ಸುಳ್ಯ: ಕಳೆದ ಮೂವತ್ತು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಚಾಂದಿನಿ ಅವರ ಚಿಕಿತ್ಸೆಗಾಗಿ ಸುಳ್ಯದ ಯುವಕರು ಸೇರಿಕೊಂಡು ನವರಾತ್ರಿ ಸಮಯದಲ್ಲಿ ವಿವಿಧ ವೇಷ ಧರಿಸಿ ಪುತ್ತೂರಿನಿಂದ ಸುಳ್ಯದವರೆಗೆ ರಸ್ತೆ ಬದಿ ಧನಸಂಗ್ರಹ ಮಾಡಿ ಹೀಗೊಂದು ಮಾನವೀಯತೆ ಮೆರೆದಿದ್ದಾರೆ.
ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದಿಂದ ವೇಷ ಧರಿಸಿ ಜೀಪಿನಲ್ಲಿ ಹೊರಟ ಸ್ವಸ್ತಿಕ್ ನರಿಯೂರು, ಸ್ವಪ್ನಿತ್ ನರಿಯೂರು, ನವೀನ್ ಅಡ್ಯಾರು, ತುಷಾರ್ ಕಣಜಾಲು ಹಾಗೂ ಪುನೀತ್ ಸಂಕೇಶ ಎಂಬ ಯುವಕರ ತಂಡ ಚಂಡ ಮುಂಡ, ಋಷಿ, ಹಿಡಿಂಬೆ ಹಾಗೂ ಬೇತಾಳ ವೇಷ ಧರಿಸಿ ಪುತ್ತೂರಿನಿಂದ ಸುಳ್ಯದವರೆಗೆ ರಸ್ತೆಯ ಅಲ್ಲಲ್ಲಿ ಧನಸಂಗ್ರಹ ಮಾಡಿದ್ದಾರೆ.
ಚಾಂದಿನಿಯವರು ವಿಶೇಷ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ನೆರವಾಗುವ ನಿಟ್ಟಿನಲ್ಲಿ ಯುವಕರು ಈ ಮಾನವೀಯತೆ ಮೆರೆದಿದ್ದಾರೆ.