ಪುತ್ತೂರರ್ದ ಪಿಲಿರಂಗ್ ಸೀಸನ್ 2ನಲ್ಲಿ ಸ್ಥಳೀಯ ವೇಷಧಾರಿಗಳಿಗೂ ಗೌರವ!

ಪುತ್ತೂರು: ಶಕುಂತಳಾ ಟಿ. ಶೆಟ್ಟಿ ಸಾರಥ್ಯದಲ್ಲಿ ಕಿಲ್ಲೆ ಮೈದಾನದಲ್ಲಿ ಪುತ್ತೂರ್ದ ಪಿಲಿರಂಗ್ ಸೀಸನ್ 2 ನಡೆಯುತ್ತಿದೆ.

ಬೆಳಿಗ್ಗೆ ಗಣಹೋಮ ನಡೆದು, ಬಳಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ತುಳು ಧ್ವಜ ಅನಾವರಣಗೊಳಿಸಿದರು. ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟನೆಗೊಳಿಸಿದರು.

ಪಿಲಿರಂಗ್ ಕ್ರೀಡಾ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ತಂಡಗಳು ಕಿಲ್ಲೆ ಮೈದಾನದ ನಡುವಿನಲ್ಲಿ ಹಾಕಿರುವ ವಿಶಾಲ ವೇದಿಕೆಯಲ್ಲಿ ತಮ್ಮ ನೈಪುಣ್ಯವನ್ನು ಪ್ರದರ್ಶಿಸುತ್ತಿವೆ. ಇದರ ನಡುವೆ ಪುತ್ತೂರು ಪೇಟೆಯಲ್ಲಿ ವಿವಿಧ ವೇಷ ಹಾಕಿ ದಸರಾ ಹಬ್ಬಕ್ಕೆ ಮೆರುಗು ನೀಡಿದ ಕಲಾವಿದರನ್ನು ಗುರುತಿಸಿ, ಗೌರವಿಸಲಾಯಿತು.



































 
 

ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಸಮಿತಿ ಗೌರವಾಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕಾರ್ಯಾಧ್ಯಕ್ಷ ಶಿವರಾಮ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top