ಅ. 22ರಂದು ಪುತ್ತೂರ್ದ ಪಿಲಿರಂಗ್ ಸೀಸನ್ 2 | ತುಳು ಧ್ವಜಾರೋಹಣ, ಬಹುಮಾನ, ಕಾರ್ಯಕ್ರಮದ ರೂಪುರೇಷೆ ವಿವರಿಸಿದ ಮಾಜಿ ಶಾಸಕಿ

ಪುತ್ತೂರು: ಸಾಂಸ್ಕೃತಿಕ ಕಲೆ ನಮ್ಮ ಊರಿಗೂ ಬರಲಿ ಎಂಬ ಉದ್ದೇಶದಿಂದ ಆರಂಭಗೊಂಡಿರುವ ಪುತ್ತೂರ್ದ ಪಿಲಿರಂಗ್ ಸೀಸನ್ 2 ಅಕ್ಟೋಬರ್ 22ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರಿಗೆ ಹೆಸರು ಬರಬೇಕು ಎಂಬ ನಿಟ್ಟಿನಲ್ಲಿ ಪಿಲಿರಂಗ್ ಆರಂಭ ಮಾಡಿದ್ದೇವೆ. ಈ ವರ್ಷ ಬೆಳಿಗ್ಗೆ 11ಕ್ಕೆ ಗಣಹೋಮ ನಡೆಯಲಿದೆ. ಬಳಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ತುಳು ಧ್ವಜ ಅನಾವರಣಗೊಳಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟನೆಗೊಳಿಸುವರು ಎಂದು ವಿವರಿಸಿದರು.

ಒಟ್ಟು 8 ತಂಡವನ್ನು ಆಹ್ವಾನ ಮಾಡಿದ್ದೇವು. ಉಳಿದೆರಡು ತಂಡಗಳು ಬೇಡಿಕೆ ಮುಂದಿಟ್ಟ ಕಾರಣ 10 ತಂಡಗಳು ಪಿಲಿರಂಗಿನಲ್ಲಿ ಭಾಗವಹಿಸಲಿವೆ. ಪ್ರತಿ ತಂಡಕ್ಕೆ 25 ನಿಮಿಷ ಸಮಯ ನೀಡಲಾಗಿದೆ. ಇಬ್ಬರು ತೀರ್ಪುಗಾರರಿದ್ದು, ರಾತ್ರಿವರೆಗೂ ಕಾರ್ಯಕ್ರಮ ನಡೆಯಲಿದೆ ಎಂದರು.



































 
 

ತಂಡದಲ್ಲಿ 15 ಹುಲಿ ಇರಲೇಬೇಕು. ಇದರೊಂದಿಗೆ ಪಟ್ಟೆ ಹುಲಿ, ಕಪ್ಪು ಹುಲಿ, ಮುಡಿ ಎತ್ತುವುದು ಹೀಗೆ ವಿವಿಧ ಆಯಾಮಗಳು ಇರಲಿವೆ. ಗೆದ್ದ ತಂಡಗಳಿಗೆ ಪ್ರಥಮ 333333 ರೂ. ಬಹುಮಾನ, ದ್ವಿತೀಯ 222222 ರೂ. ಬಹುಮಾನ ನೀಡಲಾಗುವುದು. ಹಾಗೂ ತೃತೀಯ ಹಾಗೂ ಚತುರ್ಥ ಬಹುಮಾನವಾಗಿ ಟಿವಿ ನೀಡಲಾಗುವುದು. ಅಲ್ಲದೇ, ಉಳಿದ ಎಂಟು ತಂಡಗಳಿಗೂ 40 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಿಲಿರಂಗ್ ಕ್ರೀಡಾ ಸಮಿತಿ ಗೌರವಾಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕಾರ್ಯಾಧ್ಯಕ್ಷ ಶಿವರಾಮ್ ಆಳ್ವ, ರಂಜಿತ್ ಬಂಗೇರ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top