ಹಿಂಗಾರು ಹಂಗಾಮಿನ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಶೇ. 50ರಷ್ಟು ಹೆಚ್ಚಿಸಿದ ಕೇಂದ್ರ: ಪ್ರಹ್ಲಾದ್ ಜೋಶಿ

ಬೆಂಗಳೂರು: ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಇದರಿಂದ ರೈತರು ತಾವು ಬೆಳೆದ ಬೆಳೆಗಳನ್ನು ಅತ್ಯುತ್ತಮ ಬೆಲೆಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಿದಂತಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

ಗೋಧಿ ಸೇರಿದಂತೆ ಪ್ರಮುಖ ಆರು ಹಿಂಗಾರು ಬೆಳೆಗಳಿಗೆ ಕೇಂದ್ರ ಸರಕಾರ ಬೆಂಬಲ ಬೆಲೆ ಹೆಚ್ಚಳ ಮಾಡಿದೆ. ರೈತರ ಆದಾಯ ವೃದ್ಧಿಸುವ ಜತೆಗೆ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ ನೀಡಲು ಬೆಂಬಲ ಬೆಲೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆ ಅನುಮೋದನೆ ನೀಡಿರುವ ಪ್ರಕಾರ ಚನ್ನಂಗಿ ಬೇಳೆ ಪ್ರತಿ ಕ್ವಿಂಟಾಲ್‌ಗೆ 425 ರೂ ಕನಿಷ್ಟ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದು, ಒಟ್ಟು ಒಂದು ಕ್ವಿಂಟಾಲ್‌ಗೆ 6425 ರೂ. ನಿಗದಿ ಮಾಡಲಾಗಿದೆ. ಗೋಧಿಗೆ 150 ರೂ ಹೆಚ್ಚಳ ಮಾಡುವುದರ ಮೂಲಕ ಒಟ್ಟು ಒಂದು ಕ್ವಿಂಟಾಲ್‌ಗೆ 2275 ರೂ. ನಿಗದಿ ಮಾಡಲಾಗಿದೆ. ಕಡಲೆ ರೂ 105 ರೂ. ಹೆಚ್ಚಳ ಮಾಡುವುದರ ಮೂಲಕ ಒಟ್ಟು ಒಂದು ಕ್ವಿಂಟಾಲ್‌ಗೆ 5440 ರೂ. ನಿಗದಿ ಮಾಡಲಾಗಿದೆ. ಬಾರ್ಲಿಗೆ 115 ರೂ ಕನಿಷ್ಟ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದು ಒಂದು ಕ್ವಿಂಟಾಲ್ ಗೆ 1850 ರೂ. ನಿಗದಿ ಮಾಡಲಾಗಿದೆ. ಸಾಸಿವೆಗೆ 200 ರೂ. ಕನಿಷ್ಟ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದು ಒಂದು ಕ್ವಿಂಟಾಲ್‌ಗೆ 5650 ರೂ. ನಿಗದಿ ಮಾಡಲಾಗಿದೆ. ಕುಸುಬೆಗೆ 150 ರೂ. ಹೆಚ್ಚಳ ಮಾಡುವುದರೊಂದಿಗೆ ಒಂದು ಕ್ವಿಂಟಾಲ್ ಗೆ 5800 ರೂ. ನಿಗದಿ ಪಡಿಸಲಾಗಿದೆ.



































 
 

2013-14ನೇ ಸಾಲಿನ ಬೆಂಬಲ ಬೆಲೆ ಗಮನಿಸಿದರೆ ಈ ಬಾರಿ ಶೇ. 50ರಷ್ಟು ಹೆಚ್ಚಳ ಮಾಡಿರುವುದು ಮೋದಿ ಸರಕಾರದ ವಿಶೇಷ ಎಂದು ಸಚಿವ ಜೋಶಿ ಹೇಳಿದ್ದಾರೆ. ಕೇಂದ್ರ ಸರಕಾರವು ನಿಗದಿಪಡಿಸಿರುವ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ರೈತರಿಂದ ಹಿಂಗಾರು ಬೆಳೆಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top