- ಕೃಷಿಕರ ಮುಖದಲ್ಲಿ ಮಂದಹಾಸ ಮೂಡಿಸುತ್ತಿರುವ ರಬ್ಬರ್!
ಪುತ್ತೂರು: ಕಳೆದ ಕೆಲ ದಿನಗಳಿಂದ ರಬ್ಬರ್ ಧಾರಣ ಏರಿಕೆ ಹಾದಿಯಲ್ಲಿದೆ. ಬುಧವಾರದ ರಬ್ಬರ್ ಧಾರಣೆಯನ್ನು ಗಮನಿಸಿದರೆ ರೈತರು ಖುಷಿಯಾಗುವುದು ಖಂಡಿತಾ.
ಬುಧವಾರ ಹೊಸ ಅಡಿಕೆ 325- 365 ರೂ., ಹಳೆ ಅಡಿಕೆ 380 -422 ರೂ. ಹಾಗೂ 423-425 ರೂ.ನಲ್ಲಿದೆ (ಗುಣಮಟ್ಟ). ಡಬ್ಬಲ್ ಚೋಲ್ 390 – 460 ರೂ. ಹಾಗೂ 460- 485 ರೂ. (ಗುಣಮಟ್ಟ)ನಲ್ಲಿದೆ.
ಮಂಗಳವಾರ ಹಳೆ ಅಡಿಕೆ 380 -420 ರೂ. ಹಾಗೂ 420-425 ರೂ. (ಗುಣಮಟ್ಟ), ಡಬ್ಬಲ್ ಚೋಲ್ 390 – 460 ರೂ. ಹಾಗೂ 460- 485 ರೂ. (ಗುಣಮಟ್ಟ)ನಲ್ಲಿತ್ತು.
ಕಾಳು ಮೆಣಸು ಕೆ.ಜಿ.ಗೆ 315 – 585 ರೂ., ಒಣ ಕೊಕ್ಕೊ 215- 235 ರೂ., ಹಸಿ ಕೊಕ್ಕೊ 53- 58 ರೂ., ಕೊಬ್ಬರಿ 70-83 ರೂ.ನಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.
ಏರಿಕೆ ಹಾದಿಯಲ್ಲಿರುವ ರಬ್ಬರ್ ಆರ್.ಎಸ್.ಎಸ್4 149.50 ರೂ., ಆರ್.ಎಸ್.ಎಸ್ 5 139.50 ರೂ., ಲಾಟ್ 131.50 ರೂ., ಸ್ಕ್ರಾಪ್ 80.00 ರಿಂದ 90.00 ರೂ.ನಲ್ಲಿದೆ. ಮಂಗಳವಾರ ರಬ್ಬರ್ ಆರ್.ಎಸ್.ಎಸ್4 148.50 ರೂ., ಆರ್.ಎಸ್.ಎಸ್ 5 139.00 ರೂ., ಲಾಟ್ 131.00 ರೂ., ಸ್ಕ್ರಾಪ್ 77.50 ರಿಂದ 87.50 ರೂ.ನಲ್ಲಿತ್ತು.