ಹಟ್ಟಿಯಿಂದ ದನ ಕಳವು: ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

ಸುಳ್ಯ: ತಿಂಗಳ ಹಿಂದೆ ಸಂಪಾಜೆ ಕಲ್ಲುಗುಂಡಿಯ ಗೂನಡ್ಕದಲ್ಲಿ ಹಟ್ಟಿಯಿಂದ ದನ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಪೊಲೀಸರು ಆರೋಪಿಗಳನ್ನು ಕೇರಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಳ್ಯ ಮರ್ಕುಂಜ ನಿವಾಸಿ ಗಣೇಶ್ ಕಾಯಾರ ಮತ್ತು ಕೇರಳದ ಚೆಂಬೇರಿಯ ನಿವಾಸಿ ಅಬ್ದುಲ್ ಬಂಧಿತ ಆರೋಪಿಗಳು.

ಸೆ. 13ರಂದು ತಡರಾತ್ರಿ ಎರಡು ಗಂಟೆ ವೇಳೆಗೆ ಗೂನಡ್ಕದ ವರದರಾಜ್ ಸಂಕೇಶ್ವರ್ ಅವರ ಮನೆಯ ಹಟ್ಟಿಯಲ್ಲಿದ್ದ ಎರಡು ಹಸುಗಳನ್ನು ಪಿಕಪ್ ಗೆ ತುಂಬಿ ಕದ್ದೊಯ್ಯಲಾಗಿತ್ತು.



































 
 

ಆರೋಪಿಗಳ ಚಲನ ವಲನಗಳನ್ನು ಸಿಸಿ ಕ್ಯಾಮೆರಾಗಳ ಸಹಾಯದಿಂದ ಸೆರೆ ಹಿಡಿಯಲಾಗಿತ್ತು. ಇದೀಗ ಆರೋಪಿಗಳನ್ನು ಸುಳ್ಯ ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top