- ಅಭಿವೃದ್ಧಿ ಕಾಮಗಾರಿ ವೇಳೆ ಘಟನೆ
ಬಂಟ್ವಾಳ: ಕಾಮಗಾರಿ ನಿರತ ಕಾಂಕ್ರೀಟ್ ಮಿಕ್ಸರ್ ವಾಹನ ರೈಲ್ವೇ ಹಳಿಗೆ ಬಿದ್ದ ಘಟನೆ ಬಂಟ್ವಾಳ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ಅಭಿವೃದ್ಧಿ ಕಾಮಗಾರಿ ವೇಳೆ ಘಟನೆ ನಡೆದಿದೆ. ಹಳಿಯಲ್ಲಿ ರೈಲು ಆಗಮಿಸದೇ ಇದ್ದುದರಿಂದ, ಯಾವುದೇ ಅನಾಹುತ ಸಂಭವಿಸಿಲ್ಲ.
ಚಾಲಕನ ನಿಯಂತ್ರಣ ತಪ್ಪಿ ಘಟನೆ ನಡೆದಿದೆಯಾದರೂ, ಬೇಜವಾಬ್ದಾರಿ ಬಗ್ಗೆ ಆಕ್ರೋಶವೂ ಕೇಳಿಬಂದಿದೆ. ರೈಲು ಆಗಮಿಸುವ ಮೊದಲು ಯಂತ್ರದ ತೆರವು ಆಗಬೇಕಾಗಿದ್ದು, ಕಾರ್ಯಾಚರಣೆ ನಡೆಯುತ್ತಿದೆ.
























