ವಿಶ್ವಕರ್ಮ ಕುಲಶಾಸ್ತ್ರೀಯ ಅಧ್ಯಯನದ ಸಮಾಲೋಚನಾ ಸಭೆ | ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಆರೋಗ್ಯ, ರಾಜಕೀಯ ಸ್ಥಿತಿ ದಾಖಲು

ಬೆಳ್ತಂಗಡಿ: ಕರ್ನಾಟಕ ಸರಕಾರದ ಆದೇಶದ ಅನ್ವಯ ವಿಶ್ವಕರ್ಮ ಮತ್ತು ಅದರ ಉಪಜಾತಿಗಳ ಕುಲಶಾಸ್ತ್ರೀಯ ಅಧ್ಯಯನದ ಸಮಾಲೋಚನಾ ಸಭೆ ಬೆಳ್ತಂಗಡಿ ಶ್ರೀ ವಿಶ್ವಕರ್ಮಭ್ಯುದಯ ಸಭಾ ಭವನದಲ್ಲಿ ಜರಗಿತು.

ಮೈಸೂರು ವಿಶ್ವವಿದ್ಯಾಲಯದ ನೀತಿ ಅಧ್ಯಯನ ಕೇಂದ್ರದ ಸಹಾಯಕ ಸಂಶೋಧಕ ಡಾ.ಮಹಾದೇವ ಮತ್ತು ಡಾ. ಕೃಷ್ಣಮೂರ್ತಿ ಅವರು ಅಧ್ಯಯನದ ಉದ್ದೇಶ ಮತ್ತು ಸ್ವರೂಪದ ಬಗ್ಗೆ ಮಾಹಿತಿ ನೀಡಿ, ವಿಶ್ವಕರ್ಮ ಸಮುದಾಯದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಆರೋಗ್ಯ ಮತ್ತು ರಾಜಕೀಯ ಸ್ಥಿತಿಗಳ ಹೇಳಿಕೆಗಳನ್ನು ದಾಖಲೀಕರಣ ಮಾಡಿಕೊಂಡರು. ವೈಯಕ್ತಿಕ ಪ್ರಶ್ನಾವಳಿ ಮತ್ತು ಸೂಕ್ತ ದಾಖಲೆಗಳನ್ನು ಸಮಿತಿಗೆ ಸಲ್ಲಿಸಲಾಯಿತು.

ವೇದಿಕೆಯಲ್ಲಿ ಸಭಾದ ಅಧ್ಯಕ್ಷ ಗೋಪಾಲ ಆಚಾರ್ಯ ಕನ್ನಾಜೆ, ನಿವೃತ್ತ ತಹಶೀಲ್ದಾರ್ ರಾಘವೇಂದ್ರ ಆಚಾರ್ಯ ಬಾರ್ಯ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಾಕರ ಆಚಾರ್ಯ ಗೇರುಕಟ್ಟೆ ಉಪಸ್ಥಿತರಿದ್ದರು.





















































 
 

ಶಿವಪ್ರಸಾದ ಪುರೋಹಿತ ಸವಣಾಲು, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಕೃಷ್ಣಯ್ಯ ಆಚಾರ್ಯ, ರಾಮಪ್ರಸಾದ್ ಎನ್ .ಎಸ್,  ಪುರುಷೋತ್ತಮ ಕೆ . ಎ., ರುಕ್ಮಯ ಆಚಾರ್ಯ ಕನ್ನಾಜೆ, ಅಶೋಕ ಆಚಾರ್ಯ ನಾಳ, ಬಿ.ಕೆ ಹರಿಪ್ರಸಾದ, ಸದಾನಂದ ಆಚಾರ್ಯ ಸುಲ್ಕೇರಿಮೊಗ್ರು, ಸೀತಾರಾಮ ಆಚಾರ್ಯ ವೇಣೂರು, ಭಾರತಿ ಗೇರುಕಟ್ಟೆ, ಲತಾ ಬೆಳಾಲು, ಸಾವಿತ್ರಿ ಕಕ್ಕಿಂಜೆ, ಉಪ್ಪಿನಂಗಡಿ ವಿಶ್ವಕರ್ಮ ಸಂಘದ ಅಧ್ಯಕ್ಷ ಹರೀಶ್ ಆಚಾರ್ಯ, ಹರೀಶ ಆಚಾರ್ಯ ಮದ್ದಡ್ಕ, ಜಗದೀಶ ಆಚಾರ್ಯ ಚಾರ್ಮಾಡಿ, ಗಣೇಶ ಆಚಾರ್ಯ ನೈಕುಳಿ ಮೊದಲಾದವರು ಸಂವಾದದಲ್ಲಿ ಭಾಗವಹಿಸಿದರು.

ಸಭಾದ ಕಾರ್ಯದರ್ಶಿ ಗಣೇಶ ಆಚಾರ್ಯ ಬಲ್ಯಾಯಕೋಡಿ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ರಾಜೇಶ ಆಚಾರ್ಯ ಸವಣಾಲು ಕಾರ್ಯಕ್ರಮ ನಿರ್ವಹಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top