ತೀರ್ಥಹಳ್ಳಿ: ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಹಿಂಸಾಚಾರದ ಪ್ರದೇಶಗಳಿಗೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ನೇತೃತ್ವದ ತಂಡ ಭೇಟಿ ನೀಡಿತು.
ಈದ್ ಮಿಲಾದ್ ಹಬ್ಬ ಆಚರಣೆ ಸಂದರ್ಭ ಕಲ್ಲುತೂರಾಟ ನಡೆಸಿ, ನೂರಾರು ಮನೆಗಳಿಗೆ ಹಾನಿ ಉಂಟು ಮಾಡಲಾಗಿತ್ತು. ಈ ಘಟನೆ ರಾಜ್ಯಾದ್ಯಂತ ಸುದ್ದಿಯಾಗಿದ್ದು, ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ಪ್ರಕರಣದ ಹಿನ್ನೆಲೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಹಾಗೂ ಅವರ ತಂಡ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ರಾಗಿಗುಡ್ಡದ ಲಕ್ಷ್ಮೀ ಎಂಬವರು ತನ್ನ ತಾಳಿ ಅಡ ಇಟ್ಟು ಖರೀದಿಸಿದ ಆಟೋವನ್ನು ಜಖಂಗೊಳಿಸಿದ್ದು, ಮಹಿಳೆ ಅಳಲು ತೋಡಿಕೊಂಡರು.
ಹಲವು ಮನೆಗಳ ಕಿಟಕಿ, ಬಾಗಿಲು, ಗೋಡೆ ಜಖಂಗೊಂಡಿದೆ. ಸ್ವಂತ ವಿದ್ಯಾಭ್ಯಾಸ ಕಲಿಸಿದ ಶಿಕ್ಷಕಿ ಮನೆಗೆ ಅವರ ಶಿಷ್ಯಂದಿರೇ ಕಲ್ಲು ತೂರಾಟ ನಡೆಸಿರುವುದರ ಬಗ್ಗೆ ನಿವೃತ್ತ ಶಿಕ್ಷಕಿ ಬೇಸರ ತೋಡಿಕೊಂಡರು.