ಪುಣಚ: ಜ್ವರ ಉಲ್ಬಣಗೊಂಡು ಪುಣಚ ಬೈಲುಪಾದೆಯ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.
ಬೈಲುಪಾದೆ ಲಿಯೋ ಡಿಸೋಜರವರ ಮಗ ರಿತೇಶ್ ಡಿಸೋಜ (31 ವ.) ಮೃತಪಟ್ಟ ಯುವಕ. ಅವಿವಾಹಿತರಾಗಿದ್ದ ರಿತೇಶ್ ಡಿಸೋಜ ಅವರಿಗೆ ಸೆ. 30ರಂದು ಸ್ವಲ್ಪ ಜ್ವರ ಕಾಣಿಸಿಕೊಂಡಿದ್ದರಿoದ ಸ್ಥಳಿಯ ಆಸ್ಪತ್ರೆಯಲ್ಲಿ ಮದ್ದು ಮಾಡಿದ್ದರು. ಆದರೂ ಜ್ವರ ಕಡಿಮೆಯಾಗಿರಲಿಲ್ಲ.
ಅ. 4ರಂದು ಬೆಳಿಗ್ಗೆ 5 ಗಂಟೆಯ ಸಮಯಕ್ಕೆ ಅವರಿಗೆ ತೀವ್ರ ಜ್ವರ ಉಲ್ಬಣಗೊಂಡಿದ್ದು ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ರಿತೇಶ್ ಡಿಸೋಜರವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತರ ತಂದೆ ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.