ಪುತ್ತೂರು: ಹಿಂದೂ ಶೌರ್ಯ ಸಂಗಮ, ಹಿಂದೂ ಶೌರ್ಯ ಜಾಗರಣಾ ರಥಯಾತ್ರೆಗೆ ಆಗಮಿಸುವವರಿಗೆ ವಾಹನ ಪಾರ್ಕ್ ಮಾಡಲು ಸ್ಥಳ ಸೂಚಿಸಲಾಗಿದೆ.
ಪಾಣಾಜೆ, ಕುಂಬ್ರ, ನರಿಮೊಗರು ಭಾಗದಿಂದ ಬರುವ ವಾಹನಗಳು ಮಹಾಲಿಂಗೇಶ್ವರ ದೇವಸ್ಥಾನ ಗದ್ದೆಯಲ್ಲಿ ಮತ್ತು ಉಪ್ಪಿನಂಗಡಿ, ಕಬಕ ಭಾಗದಿಂದ ಬರುವ ವಾಹನಗಳು ಹಾರಾಡಿ ರೈಲ್ವೇ ಸೇತುವೆ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಹಿಂದೂ ಶೌರ್ಯ ಜಾಗರಣ ರಥ ಯಾತ್ರೆ ಸ್ವಾಗತ ಸಮಿತಿ ವಿನಂತಿಸಿದೆ.
ವಿಶ್ವ ಹಿಂದೂ ಪರಿಷತ್ 60ನೇ ಷಷ್ಟ್ಯಬ್ದದ ಅಂಗವಾಗಿ ನಾಳೆ ಪುತ್ತೂರಿನಲ್ಲಿ ಹಿಂದೂ ಶೌರ್ಯ ಜಾಗರಣ ರಥಯಾತ್ರೆ ಮತ್ತು ಹಿಂದೂ ಶೌರ್ಯ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಹಿಂದು ಬಾಂಧವರು ಸಹಕರಿಸುವಂತೆ ಸ್ವಾಗತ ಸಮಿತಿ ವಿನಂತಿಸಿದೆ.