ಕುಶಾಲನಗರ: ಉಪನ್ಯಾಸಕಿ, ವ್ಯಕ್ತಿತ್ವ ವಿಕಸನ ತರಬೇತುದಾರೆ ಡಾ. ಅನುರಾಧಾ ಕುರುಂಜಿ ಅವರನ್ನು ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದಿಂದ ಗೌರವಿಸಲಾಯಿತು.
ಕಾವೇರಿ ನಿಸರ್ಗಧಾಮದಲ್ಲಿ ನಡೆದ “ಸಿರಿ ಸಂಭ್ರಮ” ಕವಿಗೋಷ್ಠಿ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಸ್ನೇಹ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್ ಅತಿಥಿಗಳ ಸಮ್ಮುಖದಲ್ಲಿ ಗೌರವಿಸಿದರು.
ಡಾ. ಅನುರಾಧಾ ಕುರುಂಜಿ ಅವರಿಗೆ ಇತ್ತೀಚೆಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರೂ ಆಗಿದ್ದಾರೆ. ವೇದಿಕೆಯಲ್ಲಿ ವಿಜಯ ವಿಷ್ಣು ಭಟ್, ಉಷಾ, ಸಂತೋಷ ಕುಡೆಕಲ್ಲು, ರಂಗಸ್ವಾಮಿ, ಉರ ನಾಗೇಶ್, ಫ್ಯಾನ್ಸಿ ಮುತ್ತಣ್ಣ, ಉಳವಂಗಡ ಕಾವೇರಿ, ವೈಲೇಶ್, ನ.ಲ. ವಿಜಯ್, ತುಳಸಿ ಮೊದಲಾದವರು ಉಪಸ್ಥಿತರಿದ್ದರು.