ಪುತ್ತೂರು: ವಯನಾಡ್ ಗೆ ಪ್ರವಾಸಕ್ಕೆ ತೆರಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ನಡೆದಿದೆ.
ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ಅಡೆಕ್ಕಲ್ ನಿವಾಸಿ ಅಝೀಂ (20) ಮೃತಪಟ್ಟ ಯುವಕ
ಅಝೀಂ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನಿನ್ನೆ ರಾತ್ರಿ ಸ್ನೇಹಿತರೆಲ್ಲಾ ಸೇರಿಕೊಂಡು ವಯನಾಡ್ ಗೆ ಪ್ರವಾಸಕ್ಕೆ ತೆರಳಿದ್ದರು. ಶುಕ್ರವಾರ ರಾತ್ರಿ ತೆರಳಿದವರು ರೂಮ್ ಅಲ್ಲಿ ಸ್ಟೇ ಆಗಿದ್ದು, ಇಂದು ಬೆಳಿಗ್ಗೆ ಪಯ್ಯನೂರು ಸಮೀಪ ಕೆರೆಯಲ್ಲಿ ಸ್ನಾನ ಮಾಡಲು ಇಳಿದಿದ್ದು, ಈ ವೇಳೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಮೃತದೇಹವನ್ನು ಪೆರಿಯಾರು ಮೆಡಿಕಲ್ ಕಾಲೇಜಿನಲ್ಲಿ ಇರಿಸಲಾಗಿದೆ.