ಪಡುವನ್ನೂರು ದರೋಡೆ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಪುತ್ತಿಲ ಪರಿವಾರ

ಪುತ್ತೂರು: ಪಡುವನ್ನೂರು ಗ್ರಾಮದ ಕುದ್ಕಾಡಿ ಗುರುಪ್ರಸಾದ್ ರೈ ಅವರ  ಮನೆಯಲ್ಲಿ ಸೆ. 9ರಂದು ರಾತ್ರಿ ನಡೆದ ದರೋಡೆ ಪ್ರಕರಣವನ್ನು ತಿಂಗಳೊಳಗೆ ಭೇದಿಸಿದ ಪೊಲೀಸ್ ಇಲಾಖೆಗೆ ಪುತ್ತಿಲ ಪರಿವಾರ ಅಭಿನಂದನೆ ಸಲ್ಲಿಸಿದೆ.

ಘಟನೆ ನಡೆದ ದಿನವೇ ಅರುಣ್ ಕುಮಾರ್ ಪುತ್ತಿಲ ಸಹಿತ ಪುತ್ತಿಲ ಪರಿವಾರದ ಪ್ರಮುಖರು ಗುರುಪ್ರಸಾದ್ ರೈಯವರ ಮನೆಗೆ ಭೇಟಿ ನೀಡಿದ್ದು, ಆ ಸಂದರ್ಭ ಕಳ್ಳತನ ನಡೆದ ಘಟನೆಯನ್ನು ತಾಯಿ ಮಗ ವಿವರಿಸಿದ ರೀತಿಯನ್ನು ಕಂಡಾಗ ಆರೋಪಿಗಳ ಪತ್ತೆ ಕಷ್ಟಸಾಧ್ಯವೆಂಬಂತೆ ಕಾಣುತಿತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ರಿಷ್ಯಂತ್ ಅವರು ದರೋಡೆ ಪ್ರಕರಣದ ಪತ್ತೆಯನ್ನು ಸವಾಲಾಗಿ ಸ್ವೀಕರಿಸಿ, ತಂಡ ರಚನೆ ಮಾಡಿದ್ದರು. ಆ ಮೂಲಕ ಪ್ರಕರಣ ಭೇದಿಸಿ ಅಂತರಾಜ್ಯ ದರೋಡೆ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಸ್ಪಿಯವರ ನೇತೃತ್ವದ ತಂಡದ ಜವಾಬ್ದಾರಿ ವಹಿಸಿದ್ದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಪುತ್ತೂರಿನ ಮಹಾಜನತೆಯ ಪರವಾಗಿ ಪುತ್ತಿಲ ಪರಿವಾರದ ವತಿಯಿಂದ ಅಭಿನಂದನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top