ಪುತ್ತೂರು: ಬನ್ನೂರು ನಿವಾಸಿ ಶೇಖರ್ ಎನ್.ಪಿ. ಎಂಬವರು ತನ್ನ ಮೇಲೆ ಮಾನಹಾನಿಕರ ಸುಳ್ಳು ಸುದ್ದಿ ಬಿತ್ತರಿಸಿರುವುದಾಗಿ ಆರೋಪಿಸಿ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.
ಪತ್ರಿಕೆ ಮತ್ತು ಖಾಸಗಿ ಚಾನೆಲ್ ನಲ್ಲಿ ಇಲ್ಲ ಸಲ್ಲದ ಆರೋಪ ಮಾಡಿ, ತೇಜೋವಧೆ ಮಾಡಿ, ಮಾನಹಾನಿಕರವಾದ ಸುಳ್ಳು ಸುದ್ದಿಯನ್ನು ಬಿತ್ತರಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಉದ್ಯಮಿಯಾಗಿರುವ ನಾನು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಜನಪರ ಸೇವೆಗಳಲ್ಲಿ ಭಾಗಿಯಾಗಿರುತ್ತೇನೆ. ಈ ಸಂದರ್ಭ ರಾಜಕೀಯ ಕೆಸರೆರಚಾಟಗಳು ಸಾಮಾನ್ಯವಾಗಿದ್ದು, ಈ ಹಿನ್ನೆಲೆ ತೋಜೋವಧೆ ಮಾಡುವ ಉದ್ದೇಶದಿಂದ ಮಾನಹಾನಿಕಾರವಾದ ಸುಳ್ಳು ಸುದ್ದಿ ಬಿತ್ತರಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.