ಮಹಿಳಾ ಕ್ರಿಕೆಟ್ ಏಕದಿನ ಪಂದ್ಯಾಟ: ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ ಪುತ್ತೂರು ಮೂಲದ ಶ್ರೀನಿತಿ ಪಿ.ರೈ

ಪುತ್ತೂರು: ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ನಡೆಯಲಿರುವ ಬಿಸಿಸಿಐ 19 ವರ್ಷದೊಳಗಿನ ಮಹಿಳಾ ಏಕದಿನ ಟ್ರೋಫಿ 2023-24 ಕ್ರಿಕೆಟ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಪುತ್ತೂರು ಮೂಲದ ಶ್ರೀನಿತಿ ಪಿ. ರೈ ಆಯ್ಕೆಯಾಗಿದ್ದಾರೆ.

ಅ.8 ರಿಂದ 16 ರ ತನಕ ಪಂದ್ಯಾಟ ನಡೆಯಲಿದೆ. ಶ್ರೀನಿತಿ ಪಿ. ರೈ ಬೆಂಗಳೂರಿನ ಅಕ್ಷಯ ನಗರದಲ್ಲಿರುವ ಸೈಂಟ್ ಆನ್ಸ್ ಐಸಿಎಸ್ ಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪುತ್ತೂರಿನ ಸಾಲ್ಮರ ಕೆರೆಮೂಲೆ ನಿವಾಸಿ, ಪ್ರಸ್ತುತ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮಕ್ಕಂದೂರಿನ ಹೆಮ್ಮೆತ್ತಾಳು ಗ್ರಾಮದವರಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಬಿ.ಜಿ. ಪ್ರಕಾಶ್ ರೈ ಹಾಗೂ ಪುತ್ತೂರು ತಾಲೂಕಿನ ನುಳಿಯಾಲು ವಿನುತಾ ಪ್ರಕಾಶ್ ರೈ ದಂಪತಿ ಪುತ್ರಿ.

ಎಡಗೈ ಸ್ಪಿನ್ನರ್ ಆಗಿರುವ ಶ್ರೀನಿತಿ ಬೆಂಗಳೂರಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕಲಿಕೆಯಲ್ಲೂ ಪ್ರತಿಭಾವಂತರಾಗಿರುವ ಅವರು, ಕ್ರಿಕೆಟ್ ಜತೆಗೆ ಬ್ಯಾಡ್ಮಿಂಟನ್, ವಾಲಿಬಾಲ್ ಪಂದ್ಯಾಟದಲ್ಲೂ ಶಾಲಾ ತಂಡವನ್ನು ಪ್ರತಿನಿಧಿಸುತ್ತಿದ್ದು, ಈಜಿನಲ್ಲೂ ಪರಿಣತಿ ಹೊಂದಿದ್ದಾರೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top