ಮಂಗಳೂರು: ಇಲ್ಲಿನ ಪೊಲೀಸ್ ಠಾಣೆಯೊಂದರ ಮುಂಭಾಗವೇ ಒಂದೂವರೆ ವರ್ಷದ ಎಳೆ ಮಗುವಿನ ಕುತ್ತಿಗೆ ಹಿಡಿದು, ಎತ್ತಿ ನೆಲಕ್ಕೆಸೆದು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.
ಆರೋಪಿಯನ್ನು ವ್ಯಾಸನಗರದ ನಿವಾಸಿ ಮಹೇಶ್ ಎಂದು ಗುರುತಿಸಲಾಗಿದೆ.
ಕಿರುಕುಳದಿಂದ ಬೇಸತ್ತ ಆರೋಪಿ ಮಹೇಶ್’ನ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ ವೇಳೆ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ತನ್ನ ಪತಿ ಮಹೇಶ್ ಎಂಬಾತ ತನ್ನ ಇಬ್ಬರು ಮಕ್ಕಳನ್ನು ಹಾಗೂ ತನ್ನನ್ನು ಬೆಂಕಿ ಹಾಕಿ ಸುಟ್ಟು ಹಾಕುತ್ತೇನೆ ಎಂದು ಬೆದರಿಕೆ ಹಾಕಿ, ತನಗೆ ಹಲ್ಲೆ ನಡೆಸುತ್ತಾನೆ ಎಂದು ದೂರಿದ್ದರು. ತನ್ನ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದು, ರಕ್ಷಣೆ ನೀಡಿ ಎಂದು ಮಹಿಳೆ ಕದ್ರಿ ಠಾಣೆಗೆ ಬಂದು ದೂರು ನೀಡಿದ್ದರು.