ಪುತ್ತೂರು: ಕನ್ನಡ ಐಚ್ಛಿಕ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುವವರಿಗೆ ನೆರವಾಗಲು ಕನ್ನಡ ಸಾಹಿತ್ಯ ಪರಿಷತ್’ನ ಪುತ್ತೂರು ಘಟಕ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಪ್ರಸ್ತುತ ಪದವಿ ವ್ಯಾಸಂಗ ಪೂರೈಸಿ ಆರ್ಥಿಕ ಸಮಸ್ಯೆಯಿಂದ ಉನ್ನತ ವ್ಯಾಸಂಗ ಮಾಡಲು ಅವಕಾಶ ವಂಚಿತ ವಿದ್ಯಾರ್ಥಿಗಳು ಅಥವಾ ಆಸಕ್ತ ವಿದ್ಯಾರ್ಥಿಗಳಿಗಾಗಿ ದಿನನಿತ್ಯದ ತರಗತಿಗಳಿಗೆ ಹಾಜರಾಗಿ ಕನ್ನಡದಲ್ಲಿ ಎಂ.ಎ. ಮಾಡಲು ಪುತ್ತೂರು ತಾಲೂಕಿನಲ್ಲಿರುವ ವಿದ್ಯಾ ಸಂಸ್ಥೆಯೊಂದರಲ್ಲಿ ಅವಕಾಶ ಕಲ್ಪಿಸಲಾಗಿದೆ.
ಆರ್ಥಿಕವಾಗಿ ಸಮಸ್ಯೆ ಇರುವ ಬಡ ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರದಿಂದ ವಿದ್ಯಾರ್ಥಿ ವೇತನದ ವ್ಯವಸ್ಥೆ ಮಾಡಲಾಗಿದೆ. ಸಂಖ್ಯೆ ಸೀಮಿತವಾಗಿದ್ದು, ಮುಂಚಿತವಾಗಿ ನೋಂದಣಿ ಮಾಡಿದವರಿಗೆ ಅವಕಾಶ.