ಯೂನಿಯನ್ ಬ್ಯಾಂಕ್ ಪುತ್ತೂರು ಕ್ಲಸ್ಟರ್ ಶಾಖೆಗಳಿಂದ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ

ಪುತ್ತೂರು: ಪುತ್ತೂರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ವಲಯದ ಪುತ್ತೂರು ಕ್ಲಸ್ಟರ್ ಶಾಖೆಗಳ ವತಿಯಿಂದ ಪುತ್ತೂರು ತಾಲೂಕಿನ ಸ್ವಸಹಾಯ ಸಂಘಗಳಿಗೆ ಸಾಲ ವಿತರಣಾ ಕಾರ್ಯಕ್ರಮ ಬೊಳುವಾರು ಮಹಾವೀರ ಕಾನ್ಫರೆನ್ಸ್ ಹಾಲ್ ನಲ್ಲಿ ನಡೆಯಿತು.

ಯೂನಿಯನ್ ಬ್ಯಾಂಕ್ ಮಂಗಳೂರು ವಲಯ ಕಚೇರಿ ಮಹಾ ಪ್ರಬಂಧಕ ರೇಣು ಕೆ. ನಾಯರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಏಳಿಗೆಗಾಗಿ ನೀಡಲಾಗುವ ಸಾಲ ಹಾಗೂ ಸ್ವಸಹಾಯ ಸಂಘಗಳ ಪ್ರಾಮುಖ್ಯತೆಯನ್ನು ತಿಳಿಸಿದರು.

ಪ್ರಾದೇಶಿಕ ಕಚೇರಿ ಮುಖ್ಯಸ್ಥ, ಉಪ ಮಹಾಪ್ರಬಂಧಕ ಮಹೇಶ್ ಜೆ. ಮಾತನಾಡಿ, ಸಂಘಗಳ ಸದಸ್ಯರು ಬ್ಯಾಂಕ್ ಸೌಲಭ್ಯಗಳನ್ನು ಪಡೆಯುವ ಬಗ್ಗೆ ವಿವರಿಸಿದರು.



































 
 

ಸಹಾಯಕ ಮಹಾ ಪ್ರಬಂಧಕ ಖುರೇಶಿ, ಯೂನಿಯನ್ ಬ್ಯಾಂಕ್ ನೊಂದಿಗೆ ಕೈಜೋಡಿಸಿ ಸ್ವಸಹಾಯ ಸಂಘಗಳು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಸುಮಾರು 35 ಸ್ವಸಹಾಯ ಸಂಘಗಳಿಗೆ ಇದೇ ಸಂದರ್ಭ ಸಾಲ ವಿತರಿಸಲಾಯಿತು. 200ಕ್ಕೂ ಮಿಕ್ಕಿ ಸದಸ್ಯರು ಭಾಗವಹಿಸಿದ್ದರು. ಪ್ರಾದೇಶಿಕ ಕಚೇರಿಯ ಕೃಷಿ ವಿಭಾಗ ಪ್ರಬಂಧಕ ದಿನೇಶ್ ಎಚ್.ಕೆ., ಕಡಬ, ಪುತ್ತೂರು, ಉಪ್ಪಿನಂಗಡಿ ಹಾಗೂ ಸುಳ್ಯ ಶಾಖೆಗಳ ಪ್ರಬಂಧಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top