ಸುಳ್ಯ: ಕಾಲುಬಾಯಿ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರಳ್ಯ ಅವರ ಮನೆಯಲ್ಲಿ ಚಾಲನೆ ನೀಡಲಾಯಿತು.
ಕರ್ನಾಟಕ ಸರ್ಕಾರ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಸಹಯೋಗದಲ್ಲಿ ನಡೆದ ಅಭಿಯಾನವನ್ನು ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಹರ್ಷನ್ ಕೆ.ವಿ., ಜಾನಕಿ ಮುರುಳ್ಯ, ವಸಂತ ನಡುಬೈಲು, ಸೀತಾರಾಮ ಗೌಡ, ಭುವನೇಶ್ವರ ಗೌಡ, ವಸಂತ ಹುದೇರಿ, ನಿತಿನ್ ಪ್ರಭು, ಅಜಿತ್ ಕೆ ವಿ, ಸಿಬ್ಬಂದಿಗಳು ಹಾಗೂ ಕೃಷಿಕರು, ಸ್ಥಳೀಯರು ಉಪಸ್ಥಿತರಿದ್ದರು.