ಬೆಂಗಳೂರು: ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ಶನಿವಾರ ಮಂಡ್ಯ ಬಂದ್ ನಡೆದಿದೆ. ರಾಜದಾನಿಯೂ ಸೇರಿದಂತೆ ಇಡೀ ರಾಜ್ಯಕ್ಕೆ ಹೋರಾಟ ವಿಸ್ತರಿಸುತ್ತಿದೆ. ಇದರ ನಡುವೆಯೇ ನಾನಾ ಸಂಘಟನೆಗಳು ಸೇರಿ ಬೆಂಗಳೂರು ಬಂದ್ ಕರೆ ನೀಡಿವೆ.
ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದ ಸಭೆಯಲ್ಲಿ ಬಂದ್ಗೆ ನಿರ್ಧಾರ ಮಾಡಲಾಗಿದೆ. ಅಂದು ಎಲ್ಲಾ ಸಾರ್ವಜನಿಕ ಸೇವೆ ಸ್ಥಗಿತವಾಗಲಿದೆ, ಸಂಚಾರ ವ್ಯವಸ್ಥೆ ಇರುವುದಿಲ್ಲ. ಶಾಲಾ ಕಾಲೇಜ್, ಸರ್ಕಾರಿ ಕಚೇರಿ ಕಾರ್ಯ ಚಟುವಟಿಕೆ ಸ್ಥಗಿತವಾಗಲಿದೆ.
ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಂದ್ ಮಾಡಲಾಗುತ್ತದೆ ಎಂದು ಸಂಯೋಜಕರು ತಿಳಿಸಿದ್ದಾರೆ.