ಬೆಂಗಳೂರು: ಸಿಸಿಬಿ ಬಂಧನದ ಬಳಿಕ ಚೈತ್ರಾ ಮತ್ತು ತಂಡದ ಹೊಸ ಹೊಸ ವಂಚನೆಗಳು ಇದೀಗ ಬೆಳಕಿಗೆ ಬರತೊಡಗಿದೆ.
ಸಾಲು ಮರದ ತಿಮ್ಮಕ್ಕ ಅವರಿಗೆ ನೀಡಿರುವ ಸರ್ಕಾರಿ ಸೌಲಭ್ಯಗಳನ್ನು ಚೈತ್ರಾ ಮತ್ತವರ ತಂಡ ಅಕ್ರಮವಾಗಿ ಬಳಸಿಕೊಂಡಿದೆ ಎಂಬ ಹೊಸ ಆರೋಪ ಕೇಳಿಬಂದಿದೆ.
ಚೈತ್ರಾ ಗ್ಯಾಂಗಿನ ಗಗನ್ ಎಂಬಾತ ಸಾಲು ಮರದ ತಿಮ್ಮಕ್ಕ ಅವರ ಪುತ್ರನ ಜೊತೆ ಸ್ನೇಹದಿಂದಿದ್ದ. ಇದನ್ನೇ ತಮ್ಮ ವಂಚನೆಗೆ ಬಳಸಿಕೊಂಡಿದ್ದ ಗಗನ್, ಸಾಲು ಮರದ ತಿಮ್ಮಕ್ಕ ಅವರಿಗೆ ನೀಡಿದ್ದ ಸರ್ಕಾರಿ ಕಾರನ್ನು ಬಳಸಿಕೊಂಡಿದ್ದ ಎನ್ನಲಾಗಿದೆ. ಈ ಮೂಲಕ ಬಿಜೆಪಿ ಸದಸ್ಯನ ಸೋಗು ಹಾಕಿಕೊಂಡಿದ್ದ. ಮಾತ್ರವಲ್ಲ, ವಿಧಾನಸೌಧ ಪ್ರವೇಶಕ್ಕೂ ಇದನ್ನು ಬಳಸಿಕೊಂಡಿದ್ದ ಎಂಬ ಆರೋಪ ಕೇಳಿಬಂದಿದೆ.