ವಿಟ್ಲ: ಡೆಂಗ್ಯೂ ಜ್ವರದಿಂದ ಯುವತಿ ಮೃತಪಟ್ಟ ಘಟನೆ ವಿಟ್ಲದ ಪೆರುವಾಯಿಯಲ್ಲಿ ನಡೆದಿದೆ.
ಪೆರುವಾಯಿ ನಿವಾಸಿ ಆಶಾ (25 ) ಮೃತಪಟ್ಟ ಯುವತಿ.
ಕಳೆದ ಎರಡು ದಿನಗಳಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಯುವತಿಯನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸೆ. 12 ರಂದು ಮೃತಪಟ್ಟಿದ್ದಾರೆ.