ಪುತ್ತೂರು: ಇಲ್ಲಿನ ವಾಣಿಜ್ಯ ಮತ್ತು ವರ್ತಕ ಸಂಘದ ಅಧ್ಯಕ್ಷರಾಗಿ ವಾಮನ್ ಪೈ ಅವರು ಆಯ್ಕೆಯಾಗಿದ್ದಾರೆ.
ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸರ್ವಾನುಮತದಿಂದ ಈ ಆಯ್ಕೆಯನ್ನು ನಡೆಸಲಾಯಿತು.
ಪುತ್ತೂರು ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪೆಟ್ರೋಲಿಯಂ ವರ್ತಕರ ಸಂಘದ ಜಿಲ್ಲಾಧ್ಯಕ್ಷನಾಗಿಯೂ ಕೆಲಸ ನಿರ್ವಹಿಸಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾಗಿದ್ದರು. ಬಿರುಮಲೆ ಬೆಟ್ಟ ಅಭಿವೃದ್ಧಿ ಸಮಿತಿಯ ಸದಸ್ಯನಾಗಿಯೂ ಗುರುತಿಸಿಕೊಂಡಿದ್ದಾರೆ.
ವಾಮನ್ ಪೈ ಅವರು ಜಿ.ಎಸ್.ಬಿ. ಅಭಿವೃದ್ಧಿ ಸಭಾದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ದರ್ಬೆ ಗಣೇಶ್ ಟ್ರೇಡರ್ಸಿನ ಮಾಲಕರಾಗಿರುವ ಇವರು, ಉಜಿರೆ ಪಿ.ಸಿ. ಪೈ ಆ್ಯಂಡ್ ಕೋ ಇದರ ಪಾಲುದಾರರಾಗಿದ್ದಾರೆ.