ದೆಹಲಿ: ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿರುವ 223 ಶಾಸಕರ ಒಟ್ಟು ಆಸ್ತಿ 14,359 ಕೋಟಿ ರೂಪಾಯಿ. ಈ ಹಣ ಮಿಜೋರಂ ಹಾಗೂ ಸಿಕ್ಕಿಂನ 2023-24 ರ ಬಜೆಟ್ ಗೆ ಸಮ ಎಂದು ವರದಿಯೊಂದು ಹೇಳಿದೆ.
ದೇಶದ 4001 ಶಾಸಕರ ಒಟ್ಟು ಆಸ್ತಿ 54,545 ಕೋಟಿ ರೂಪಾಯಿ. ಇದು ಮಿಜೋರಂ, ನಾಗಲ್ಯಾಂಡ್ ಹಾಗೂ ಸಿಕ್ಕಿಂ ರಾಜ್ಯಗಳ ಬಜೆಟ್ ಮೊತ್ತವಾದ 49,103 ಕೋಟಿ ರೂ. ಗಿಂತ ಅಧಿಕ ಎಂದು ಅಸೋಸಿಯೇಶನ್ ಫಾರ್ ಡೆಮೊಕ್ರಟಿಕ್ ರೀಸರ್ಚ್ (ಎಡಿಆರ್) ಹಾಗೂ ನ್ಯಾಷನಲ್ ಎಲೆಕ್ಷನ್ ವಾಚ್ (ಎನ್ಇಡಬ್ಲ್ಯೂ) ವಿಶ್ಲೇಷಣೆ ಮಾಡಿವೆ. ಶಾಸಕರು ಸಲ್ಲಿಸಿದ ಫಿಡವಿಟ್ ಆಧರಿಸಿ ಅವು ಈ ಲೆಕ್ಕಾಚಾರ ಹಾಕಿವೆ. ಒಟ್ಟಾರೆ 4033 ಶಾಸಕರ ಪೈಕಿ 4001 ಶಾಸಕರ ಚುನಾವಣಾ ಅಫಿಡವಿಟ್ ಗಳು ವಿಶ್ಲೇಷಣೆ ಮಾಡಲಾಗಿದೆ.
ದೇಶದ ಶಾಸಕರ ಒಟ್ಟು ಆಸ್ತಿಯಲ್ಲಿ ಕರ್ನಾಟಕದ ಪಾಲು ಶೇ.26
ದೇಶದ ಬಿಜೆಪಿ ಶಾಸಕರ ತಲಾವಾರು ಸರಾಸರಿ ಆಸ್ತಿ 11.97 ಕೋಟಿ
ಕಾಂಗ್ರೆಸ್ ಶಾಸಕರ ಸರಾಸರಿ ತಲಾ ಆಸ್ತಿ 21.97 ಕೋಟಿ ರೂಪಾಯಿ.