ವಿಟ್ಲ
: ದ.ಕ.ಶಾಮಿಯಾನ ಮಾಲಕರ ಸಂಘ ವಿಟ್ಲ ಘಟಕದ ನೂತನ ಪದಾಧಿಕಾಗಳ ಪದಗ್ರಹಣ ಸಮಾರಂಭ ಆ.23 ಬುಧವಾರ ಬೆಳಿಗ್ಗೆ 11.30 ಕ್ಕೆ ವಿಟ್ಲ ಕಲ್ಲಕಟ್ಟ ಭಾರತ್ ಸಭಾಭವನದಲ್ಲಿ ನಡೆಯಲಿದೆ.
ವಿಟ್ಲ ಅರಮನೆ ಬಂಗಾರು ಅರಸರು ಸಮಾರಂಭ ಉದ್ಘಾಟಿಸಲಿದ್ದು, ದ.ಕ.ಶಾಮಿಯಾನ ಮಾಲಕರ ಸಂಘದ ವಿಟ್ಲ ಘಟಕದ ಅಧ್ಯಕ್ಷ ಚಂದ್ರಹಾಸ ಸುವರ್ಣ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ದೇಲಂತಬೆಟ್ಟು ಸಂತ ಪಾವುಲ್ ಇಗರ್ಜಿ ಧರ್ಮಗುರು ಫಾ.ಸುನೀಲ್ ಪ್ರವೀಣ್ ಪಿಂಟೋ, ವಿಟ್ಲ ನೋಟರಿ ವಕೀಲ ಅಬೂಬಕ್ಕರ್, ಲಯನ್ಸ್ ಜಿಲ್ಲೆ 317ಡಿ ಪೂರ್ವ ಜಿಲ್ಲಾ ಗವರ್ನರ್ ಡಾ.ಗೀತಪ್ರಕಾಶ್, ದ.ಕ.ಶಾಮಿಯಾನ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಬಾಬು ಕೆ. ವಿಟ್ಲ, ಕಾರ್ಯದರ್ಶಿ ನಿಶಿತ್ ಸುವರ್ಣ, ಕೋಶಾಧಿಕಾರಿ ಬಾಲಕೃಷ್ಣ ಕದ್ರಿ, ಮಂಗಳೂರು ಎಂ.ಎಸ್.ವಿ. ಟೆಂಟ್ ವರ್ಕ್ಸ್ ನ ಲತೀಫ್, ಮಂಗಳೂರು ಕರಾವಳಿ ಟೆಂಟ್ ವರ್ಕ್ಸ್ ನ ರಶೀದ್, ಮಂಗಳೂರು ಪೂನಿಯಾ ಟೆಂಟ್ ವರ್ಕ್ಸ್ ನ ರಾಜೇಶ್ ಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ವಿಟ್ಲ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.