ಬೆಳ್ತಂಗಡಿ ರೆಖ್ಯ ನಿವಾಸಿ ಲೋಕೇಶ್ ಮೃತದೇಹ ಗುಂಡ್ಯ ಹೊಳೆಯಲ್ಲಿ ಪತ್ತೆ

ಬೆಳ್ತಂಗಡಿ: ಸೋಮವಾರ ನಾಪತ್ತೆಯಾಗಿದ್ದ ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಲೋಕೇಶ್ (43) ಎಂಬವರ ಮೃತದೇಹ ಗುಂಡ್ಯ ಹೊಳೆಯಲ್ಲಿ ಬುಧವಾರ ಮಧ್ಯಾಹ್ನ ಪತ್ತೆಯಾಗಿದೆ.

ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದು, ಅವರ ಬೈಕ್ ಉದನೆ ಬಳಿಯ ಕಡೆಂಬಿಲ ಎಂಬಲ್ಲಿಯ ಹೊಳೆ ಸಮೀಪದ ಹೆದ್ದಾರಿ ಬದಿಯಲ್ಲಿ ಪತ್ತೆಯಾಗಿತ್ತು. ಲೋಕೇಶ್ ಅವರು ಗುಂಡ್ಯ ಹೊಳೆಯಲ್ಲಿ ಮುಳುಗಿರುವ ಶಂಕೆ ಹಿನ್ಲೆಯಲ್ಲಿ ಹುಡುಕಾಟ ನಡೆಸಲಾಗಿತ್ತು.

ಲೋಕೇಶ್ ಅವರು ಸೋಮವಾರ ತನ್ನ ಬೈಕ್‍ನಲ್ಲಿ ಉದನೆ ಪೇಟೆಗೆಂದು ಹೋಗಿದ್ದು, ಲೋಕೇಶ್ ಅವರ ಅಣ್ಣ ರಾಮಚಂದ್ರ  ಗೌಡರು ನೆಲ್ಯಾಡಿಗೆ ಹೋಗಿ ಹಿಂದಿರುಗು ಬರುತ್ತಿದ್ದಾಗ ತಮ್ಮ ಲೋಕೇಶ್ ಅವರ ಬೈಕ್ ಉದನೆ ಕಡೆಂಬಿಲ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಲಾಗಿತ್ತು. ತಕ್ಷಣ ಲೋಕೇಶ್ ಅವರಿಗೆ ಕರೆ ಮಾಡಿದಾಗ ಪತ್ನಿ ವಿಶಾಲ ಅವರು ಕರೆ ಸ್ವೀಕರಿಸಿ ಮೊಬೈಲ್ ಮನೆಯಲ್ಲೇ ಬಿಟ್ಟು ಹೋಗಿರುವುದಾಗಿ ತಿಳಿಸಿದ್ದಾರೆ. ರಾತ್ರಿಯಾದರೂ ಲೋಕೇಶ್ ಅವರು ಮನೆ ಬಾರದ್ದರಿಂದ ರಾಮಚಂದ್ರ ಗೌಡ ಹಾಗೂ ಇತರರು ಗುಂಡ್ಯ ನದಿ ದಡದಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಈ ಕುರಿತು ರಾಮಚಂದ್ರ ಗೌಡ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು,  ಕೇಸು ದಾಖಲಾಗಿತ್ತು..



































 
 

ಲೋಕೇಶ್ ಅವರ ಬೈಕ್ ಗುಂಡ್ಯ ಹೊಳೆ ಬದಿ ಪತ್ತೆಯಾಗಿರುವ ಹಿನ್ನಲೆಯಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳು, ಧರ್ಮಸ್ಥಳ ಶೌರ್ಯ ತಂಡದ ಸದಸ್ಯರು ಹೊಳೆಯಲ್ಲಿ ಹುಡುಕಾಟ ನಡೆಸುತ್ತಿದ್ದರು. ಇದೀಗ ಅವರ ಮೃತದೇಹ ಪತ್ತೆಯಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top