ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಲೋಕೇಶ್ (43) ಎಂಬವರು ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದು, ಅವರ ಬೈಕ್ ಉದನೆ ಬಳಿಯ ಕಡೆಂಬಿಲ ಎಂಬಲ್ಲಿಯ ಹೊಳೆ ಸಮೀಪದ ಹೆದ್ದಾರಿ ಬದಿಯಲ್ಲಿ ಪತ್ತೆಯಾಗಿದೆ.
ಲೋಕೇಶ್ ಅವರು ಗುಂಡ್ಯ ಹೊಳೆಯಲ್ಲಿ ಮುಳುಗಿರುವ ಶಂಕೆ ಹಿನ್ಲೆಯಲ್ಲಿ ಹುಡುಕಾಟ ನಡೆಸಲಾಗಿದೆ.
ಲೋಕೇಶ್ ಅವರು ಸೋಮವಾರ ತನ್ನ ಬೈಕ್‍ನಲ್ಲಿ ಉದನೆ ಪೇಟೆಗೆಂದು ಹೋಗಿದ್ದು, ಲೋಕೇಶ್ ಅವರ ಅಣ್ಣ ರಾಮಚಂದ್ರ ಗೌಡರು ನೆಲ್ಯಾಡಿಗೆ ಹೋಗಿ ಹಿಂದಿರುಗು ಬರುತ್ತಿದ್ದಾಗ ತಮ್ಮ ಲೋಕೇಶ್ ಅವರ ಬೈಕ್ ಉದನೆ ಕಡೆಂಬಿಲ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಲಾಗಿತ್ತು. ತಕ್ಷಣ ಲೋಕೇಶ್ ಅವರಿಗೆ ಕರೆ ಮಾಡಿದಾಗ ಪತ್ನಿ ವಿಶಾಲ ಅವರು ಕರೆ ಸ್ವೀಕರಿಸಿ ಮೊಬೈಲ್ ಮನೆಯಲ್ಲೇ ಬಿಟ್ಟು ಹೋಗಿರುವುದಾಗಿ ತಿಳಿಸಿದ್ದಾರೆ. ರಾತ್ರಿಯಾದರೂ ಲೋಕೇಶ್ ಅವರು ಮನೆ ಬಾರದ್ದರಿಂದ ರಾಮಚಂದ್ರ ಗೌಡ ಹಾಗೂ ಇತರರು ಗುಂಡ್ಯ ನದಿ ದಡದಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಈ ಕುರಿತು ರಾಮಚಂದ್ರ ಗೌಡ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಲೋಕೇಶ್ ಅವರ ಬೈಕ್ ಗುಂಡ್ಯ ಹೊಳೆ ಬದಿ ಪತ್ತೆಯಾಗಿರುವ ಹಿನ್ನಲೆಯಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳು, ಧರ್ಮಸ್ಥಳ ಶೌರ್ಯ ತಂಡದ ಸದಸ್ಯರು ಹೊಳೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೂ ಪತ್ತೆಯಾಗಿಲ್ಲ. ನೆಲ್ಯಾಡಿ ಹೊರಠಾಣೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.