ಬಂಟ್ವಾಳ : ಸೌಜನ್ಯರನ್ನು ಕ್ರೂರವಾಗಿ ಅತ್ಯಾಚಾರ ಮಾಡಿದ ನೈಜ ಆರೋಪಿಗಳಿಗೆ ಶಿಕ್ಷೆಯಾಗಲೆಂದು ವಿಶ್ವಹಿಂದೂಪರಿಷದ್ ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಕಾರಣಿಕ ಕ್ಷೇತ್ರ ಕಾರಿಂಜೇಶ್ವರ ಸನ್ನಿದಿಯಲ್ಲಿ ಸೋಮವಾರ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.
ನೈಜ ಆರೋಪಿಗಳಿಗೆ ಕಾನೂನು ಶಿಕ್ಷೆ ಆಗಲಿ ಆದರೂ ದೈವ ದೇವರ ಮೇಲೆ ನಂಬಿಕೆ ಇರಿಸಿದವರು ನಾವು ತಪ್ಪು ಮಾಡಿದವರಿಗೆ ಕಾನೂನಿನಲ್ಲಿ ತಪ್ಪಿಸಿಕೊಂಡರು ಕಾರ್ಣಿಕ ಕ್ಷೇತ್ರವಾದ ಕಾರಿಂಜೇಶ್ವರ ದೇವರ ಅನುಗ್ರಹದಿಂದ ನಿಜವಾದ ಆರೋಪಿಗಳು ಯಾರೇ ಆಗಿರಲಿ ಅವರಿಗೆ ಹುಚ್ಚು ಹಿಡಿದು ಅವರೇ ಆರೋಪಿಗಲೆಂದು ಸಮಾಜಕ್ಕೆ ಆದಷ್ಟು ಬೇಗ ತಿಳಿದು ಬರಬೇಕು ಎಂದು ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು
ವಿಶ್ವ ಹಿಂದೂ ಪರಿಷದ್ ಭಜರಂಗದಳದ ಜಿಲ್ಲಾ ಪ್ರಮುಖರು ಹಾಗೂ ಬಂಟ್ವಾಳ ಪ್ರಖಂಡ ದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು