ಅಂಗಡಿ ಮುಂಭಾಗ ಸರಕು ಇಳಿಸುವ ವಾಹನ, ಚಾಲಕರಿಗೆ ದಂಡ ವಿಧಿಸದಂತೆ ಸಂಚಾರಿ ಠಾಣಾಧಿಕಾರಿಗಳಿಗೆ ವರ್ತಕರಿಂದ ಮನವಿ

ಪುತ್ತೂರು: ಪುತ್ತೂರು ಪೇಟೆಯ ಪ್ರಮುಖ ರಸ್ತೆಗಳಲ್ಲಿ ಅಂಗಡಿಯ ಮುಂಭಾಗ ವಾಹನದಲ್ಲಿ ಬಂದಂತಹ ಸರಕು ಸಾಗಣೆ ಸಮಯ ತುರ್ತಾಗಿ ನಿಲ್ಲಿಸಿ ತೆರಳುತ್ತಿರುವ ಸಮಯದಲ್ಲಿ ವರ್ತಕರಲ್ಲಿಗೆ ಬಂದಂತ ವಾಹನಗಳಿಗೆ ಹಾಗೂ ಚಾಲಕರಿಗೆ ದಂಡ ವಿಧಿಸದಂತೆ ಸಂಚಾರಿ ಠಾಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಪುತ್ತೂರು  ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದ್ದು, ಸಂಘದ ಜಾನ್ ಕುಟಿನ್ಹಾ, ವಾಮನ್ ಪೈ, ಉಲ್ಲಾಸ್ ಪೈ, ಮನೋಜ್ ಟಿವಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮುಖ್ಯ ರಸ್ತೆಯಿಂದ ಕೋರ್ಟ್ ರಸ್ತೆಗೆ ಹೋಗಲು ವ್ಯವಸ್ಥೆ ಮಾಡುವುದರಿಂದ ಮುಖ್ಯ ರಸ್ತೆಯ ವಾಹನ ದಟ್ಟಣೆ ಕಡಿಮೆಯಾಗುತ್ತದೆ ಎಂದು ಠಾಣಾಧಿಕಾರಿಯವರಲ್ಲಿ ಚರ್ಚಿಸಲಾಯಿತು. ಪ್ರಮುಖ ರಸ್ತೆಗಳಲ್ಲಿ ಸುಗಮ ಸಂಚಾರಕ್ಕಾಗಿ ನಗರಸಭೆ ಪೌರಾಯುಕ್ತರು, ಪೊಲೀಸ್ ಠಾಣಾಧಿಕಾರಿ, ಆರ್ ಟಿ ಓ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ನಿರ್ಣಯಿಸಲಾಗಿದೆ



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top