ಪುತ್ತೂರು: ಕೊಳ್ತಿಗೆ ಸರಕಾರಿ ಹಿ.ಪ್ರಾ. ಶಾಲೆಯ ವಿಶ್ರಾಂತ ಮುಖ್ಯ ಶಿಕ್ಷಕ, ಕೊಳ್ತಿಗೆ ಕೆಳಗಿನ ಮನೆಯ ತರವಾಡ್ ಯಜಮಾನ ನಾರಾಯಣ ರೈ (90) ಗುರುವಾರ ಮಧ್ಯಾಹ್ನ ನಿಧನರಾದರು.
ಮುರುಳ್ಯ, ಕೊಳ್ತಿಗೆ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಅವರ ಅವಧಿಯಲ್ಲಿ ಶಾಲೆ ಶೈಕ್ಷಣಿಕವಾಗಿ ಪ್ರಗತಿ ಹೊಂದಿತ್ತು.
ಮೃತರು ಮಕ್ಕಳು, ಸೊಸೆಯಂದಿರು, ಸಹೋದರ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.