ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿರುವ ಮಂಗಳೂರಿನ ಕುಂಪಲದ ದಿನೇಶ್ ಅವರಿಗೆ ಚಿಕಿತ್ಸಾ ವೆಚ್ಚಕ್ಕೆ ಸಿಟಿಗುಡ್ಡೆ ಶ್ರೀ ಕೃಷ್ಣ ಯುವಕ ಮಂಡಲದ ವತಿಯಿಂದ ಸಹಾಯಧನವನ್ನು ಸೋಮವಾರ ಹಸ್ತಾಂತರಿಸಲಾಯಿತು.
ಜುಲೈ ತಿಂಗಳ ತಂಡದ ಜೊತೆ ನಿರಂತರವಾಗಿ ಸೇವೆಯಲ್ಲಿ ತೊಡಗಿಕೊಂಡು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ನಿಸ್ವಾರ್ಥ ಸೇವಾರ್ಥಿಗಳ ಸಹಾಯದಿಂದ 8200 ರೂ.ಪಾಯಿಗಳನ್ನು ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.