ಪುತ್ತೂರು: ದ.ಕ.ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಸುಳ್ಯ ಹಾಗೂ ಕೊಡಗು ಜಿಲ್ಲೆಯ ಗೋಣಿಕೊಪ್ಪದಲ್ಲಿ ತನ್ನ ಶಾಖೆಯನ್ನು ಹೊಂದಿರುವ ಮುಳಿಯ ಕೇಶವ ಭಟ್ಟ & ಸನ್ಸ್ ನ ಪುತ್ತೂರು ಹಾಗೂ ಬೆಳ್ತಂಗಡಿ ಸಂಸ್ಥೆಯಲ್ಲಿ ಮುಳಿಯ ಮಾನ್ಸೂನ್ ಧಮಾಕ ಜು.24 ರಿಂದ ಆರಂಭಗೊಂಡಿದೆ.
ಕಳೆದ ಹಲವಾರು ವರ್ಷಗಳಿಂದ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಮುಳಿಯ ಜ್ಯುವೆಲ್ಲರ್ಸ್ ಎಲ್ಲೆಡೆ ತನ್ನ ಸಂಸ್ಥೆಯನ್ನು ತೆರೆದು ಗ್ರಾಹಕ ವರ್ಗದ ವಿಶ್ವಾಸ ಪಡೆದು ಪ್ರಾಮಾಣಿಕ ಸೇವೆಯೊಂದಿಗೆ ಬೆಳೆದು ಬಂದಿದೆ.
ಮುಂಗಾರಿನ ಸಂಭ್ರಮವನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಮುಳಿಯ ಮಾನ್ಸೂನ್ ಧಮಾಕದಲ್ಲಿ ಹಳೆಯ ಚಿನ್ನಾಭರಣಗಳನ್ನು ಹೊಸ 916 ಆಭರಣಗಳೊಂದಿಗೆ ವಿನಿಮಯ ಮಾಡಿ ಪ್ರತಿ ಗ್ರಾಂ ಮೇಲೆ 100 ರೂ. ಅಧಿಕ ಪಡೆಯುವ ವ್ಯವಸ್ಥೆ ಮಾಡಿದೆ. ಆಭರಣಗಳ ವಿಎ ಶುಲ್ಕದಲ್ಲಿ ಶೇ.50 ರ ವರೆಗೆ ರಿಯಾಯಿತಿ ಇದ್ದು. ವಜ್ರದ ಮೌಲ್ಯದ ಮೇಲೆ ಶೇ.10 ಹಾಗೂ ಬೆಳ್ಳಿ ಆಭರಣಗಳ ಮೇಲೆ ಶೇ.5 ವಿನಾಯಿತಿ ಇದೆ ಎಂದು ಮುಳಿಯ ಜ್ಯುವೆಲ್ಸ್ ಪ್ರಕರಣೆಯಲ್ಲಿ ತಿಳಿಸಿದೆ.