ವಿಟ್ಲ : ವಿಟ್ಲ ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ಹಾಗೂ ಚಂದಳಿಕೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಬೆಳ್ಳಿಹಬ್ಬ ಸಮಿತಿ ವತಿಯಿಂದ ಈ ಬಾರಿ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯಲಿದ್ದು, ಬೆಳ್ಳಿಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಸೆ.19 ರಿಂದ 22 ರ ತನಕ ಚಂದಳಿಕೆ ಮಂಗಳ ಮಂಟಪದಲ್ಲಿ ಶ್ರೀ ಗಣೇಶೋತ್ಸವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಆಮಂತ್ರಣ ಪತ್ರಿಕೆಯನ್ನು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬೆಳ್ಳಿಹಬ್ಬ ಸಮಿತಿಯ ಗೌರವಾಧ್ಯಕ್ಷ ಶಂಕರ ಭಟ್ ಬದನಾಜೆ ಅವರ ಮಾರ್ಗದರ್ಶನದಲ್ಲಿ ಕೃಷ್ಣಯ್ಯ ಕೆ ಅರಮನೆ. ಗಣೇಶ ಚಂದಳಿಕೆ ಮತ್ತು ಅರ್ಚಕ ಉದಯೇಶ್ ಕೆದಿಲಾಯರು ಬಿಡುಗಡೆಗೊಳಿಸಿದರು
ಈ ಸಂದರ್ಭದಲ್ಲಿ ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಜಯರಾಮ ಪರನೀರು ನಿಡ್ಯ. ಕ್ಲಬ್ ನ ಅಧ್ಯಕ್ಷ ಗಂಗಾಧರ ಸಿ. ಕೋಶಾಧಿಕಾರಿ ನರೇಂದ್ರ ಸಿ., ಕಾರ್ಯದರ್ಶಿ ವಿಶ್ವನಾಥ ಅಳಿಕೆ, ದೇವಸ್ಥಾನದ ಜಯರಾಮ ಬಲ್ಲಾಳ್ ಅರಮನೆ ಹಾಗೂ ಪದಾಧಿಕಾರಿಗಳಾದ ಬಿ. ಕೆ. ಬಾಬು. ಕೃಷ್ಣ ಮುದೂರು. ಜಗದೀಶ್ ಗೌಡ ಎಂ. ಲೋಹಿತ್ ಎಂ. ದೀಕ್ಷಿತ್ ಎಂ. ಚೇತನ್ ಕೆ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು
























