ಅಖಿಲ ಭಾರತ ಕರಕುಶಲ ಸ್ಪರ್ಧೆ : ಶ್ರೇಯ ಕೆ ಹೆಚ್‌ ಗೆ ಪ್ರಥಮ ಸ್ಥಾನ

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರಥಮ ಎಂ ಎಸ್ಸಿ ತರಗತಿಯಲ್ಲಿ ಅಧ್ಯಯನ ನಡೆಸುತ್ತಿರುವ ಶ್ರೇಯ ಕೆ ಹೆಚ್‌ ಗೆ ನವದೆಹಲಿಯ ನವ ಶ್ರೀ ಕಲೆ ಮತ್ತು ಸಂಸ್ಕೃತಿ ಸಂಸ್ಥೆ, ಇತ್ತೀಚೆಗೆ ನಡೆಸಿದ ರಾಷ್ಟ್ರೀಯ ಮಟ್ಟದ ಕರಕುಶಲ ಸ್ಪರ್ಧೆ ‘ಶಿಲ್ಪ್ ಆಕಾರ್‌ʼ ನಲ್ಲಿ ಪ್ರಥಮ ಸ್ಥಾನ ದೊರೆತಿದೆ.

“ಶಿಲ್ಪ್ ಆಕಾರ್” ಕಲೆ ಮತ್ತು ಕರಕುಶಲತೆಗೆ ಸಂಬಂಧಿಸಿದ ರಾಷ್ಟ್ರ ಮಟ್ಟದ ಸ್ಪರ್ಧೆಯಾಗಿದೆ. ಇದರಲ್ಲಿ ಭಾಗವಹಿಸುವವರು ತಮ್ಮ ಸೃಜನಶೀಲತೆ  ಮತ್ತು ಕಲಾತ್ಮಕ ಕೌಶಲ್ಯಗಳನ್ನು ವಿವಿಧ ಸಾಂಪ್ರದಾಯಿಕ ಅಥವಾ ಸಮಕಾಲೀನ ಕಲಾಕೃತಿಗಳನ್ನು ತಯಾರಿಸಿ ಪ್ರದರ್ಶಿಸುತ್ತಾರೆ.

ಆರ್ಟಿಜೆನ್ ಆರ್ಟ್ ಗ್ಯಾಲರಿಯಲ್ಲಿ ನಡೆದ ‘ಡ್ರಾಯಿಂಗ್, ಪೇಂಟಿಂಗ್, ಆರ್ಟ್ ಮತ್ತು ಕ್ರಾಫ್ಟ್’  ಪ್ರದರ್ಶನದಲ್ಲಿ ಅವರ ಕರಕುಶಲತೆಯನ್ನು ಪ್ರದರ್ಶಿಸಲಾಯಿತು ಹಾಗೂ ಆರ್ಟಿಜೆನ್ ಆರ್ಟ್ ಗ್ಯಾಲರಿಯಲ್ಲಿ  ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪತ್ರದೊಂದಿಗೆ ಬಹುಮಾನ ವಿತರಿಸಲಾಯಿತು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top